ಸೈಬರ್ ವಂಚನೆ ದೆಹಲಿಗೆ ತೆರಳಿ ಆರೋಪಿ ಬಂಧಿಸಿದ ಮಂಗಳೂರು ಸೆನ್ ಪೊಲೀಸರು

mng 6 Dec gowravu makwan
Published on

ಮಂಗಳೂರು: ಯದುನಂದನ್ ಎಂಬವರ ವಾಟ್ಸ್‌ಆ್ಯಪ್‌ಗೆ ್ಖಅಏಅಘೆ ಅ್ಕಐ್ಖಅಏಅಘೆ. ಎಂಬ ಫೈಲ್ ಬಂದಿತ್ತು. ಅವರು ಅದು ಸಾರಿಗೆ ಇಲಾಖೆಗೆ ಸಂಬಂಧಿಸಿ ಲಿಂಕ್ ಆಗಿರಬಹುದು ಎಂಬ ಕಾರಣಕ್ಕೆ ಅದನ್ನು ಡೌನ್‌ಲೋಡ್ ಮಾಡಿದ್ದರು. ಆ ಕೂಡಲೇ ಅವರ ಪ್ಲಿಪ್‌ಕಾರ್ಟ್ ಖಾತೆ ಹ್ಯಾಕ್ ಆಗಿತ್ತು. ಸೈಬರ್ ವಂಚಕರು ಅವರ ಪ್ಲಿಪ್‌ಕಾರ್ಟ್ ಖಾತೆ ಬಳಸಿಕೊಂಡು ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳಿಂದ 1.31 ಲ.ರೂ. ಮೌಲ್ಯದ ಎರಡು ಮೊಬೈಲ್ ಪೋನ್, 1 ಏರ್‌ಪಾಡ್ ಮತ್ತು ಗಿಫ್ಟ್ ವೋಚರ್‌ಗಳನ್ನು ಖರೀದಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಮಂಗಳೂರಿನ ಸೆನ್ ಕ್ರೈಂ ಪೊಲೀಸ್ ಠಾಣೆಯ ಪಿಎಸ್‌ಐ ಗುರಪ್ಪ ಕಾಂತಿ ಹಾಗೂ ಪಿಸಿ ತಿಪ್ಪಾ ರೆಡ್ಡಿ ಅವರು ಪ್ರಕರಣ ದಾಖಲಾದ 48 ಗಂಟೆಯೊಳಗೆ ಆರೋಪಿ ಗೌರವ್ ಮಕ್ವಾನ್ (25) ಎಂಬಾತನನ್ನು ನವದೆಹಲಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯಿಂದ 2 ಆಂಡ್ರಾಯ್ಡಾ ಪೋನ್, 5 ಐಪೋನ್-15, 2 ಏರ್‌ಪಾಡ್ ಹಾಗೂ ಕೃತ್ಯಕ್ಕೆ ಬಳಸಿದ ಮೊಬೈಲ್ ಪೋನ್ ಸೇರಿದಂತೆ 4 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿ ಇತರ ಆರೋಪಿಗಳ ಜತೆ ಸೇರಿ ಹಲವಾರು ಮಂದಿಗೆ ವಂಚಿಸಿರುವುದು ಗೊತ್ತಾಗಿದೆ.

ಸೆನ್ ಠಾಣೆಯ ಎಸಿಪಿ ರವೀಶ್ ನಾಯಕ್ ಅವರ ನೇತೃತ್ವದಲ್ಲಿ ಇತರ ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net