ಅಕ್ರಮ ಕಸಾಯಿಖಾನೆಗೆ ದಾಳಿ 180 ಕೆ.ಜಿ. ದನದ ಮಾಂಸ ಸಹಿತ ಮೂವರ ಬಂಧನ

mng--28 march cow meat
Published on

ಮಂಗಳೂರು: ನಗರದ ಹೊರ ವಲಯದ ವಳಚ್ಚಿಲ್ ಖಾದರ್ ಮಹಮ್ಮದ್ ಗೌಸ್ ಎಂಬಾತನ ಮನೆಯ ಶೆಡ್‌ನಲ್ಲಿ ಗುರುವಾರ ಅಕ್ರಮವಾಗಿ ಜಾನುವಾರುಗಳನ್ನು ಕಡಿದು ಮಾಂಸ ಮಾರಾಟ ಮಾಡುತ್ತಿರುವುದನ್ನು ಗ್ರಾಮಾಂತರ ಪೊಲೀಸರು ಪತ್ತೆ ಮಾಡಿ, 180 ಕೆ.ಜಿ. ದನದ ಮಾಂಸ ಸಹಿತ ಮೂವರನ್ನು ಬಂಧಿಸಿದ್ದಾರೆ.


ವಳಚ್ಚಿಲ್ ಖಾದರ್ ಮಹಮ್ಮದ್ ಯಾನೆ ಮೋನು (52), ಮಾರಿಪಳ್ಳ ಮಸೀದಿ ಬಳಿಯ ಇಸ್ಮಾಯಿಲ್ (27), ಅಡ್ಯಾರ್ ಪದವು ಮಸೀದಿ ಬಳಿಯ ಮೊಹಮ್ಮದ್ ಶವೀರ್ (18) ಬಂಧಿತರು.
ಖಚಿತ ಮಾಹಿತಿ ಮೇರೆಗೆ ಹಿರಿಯ ಅಧಿಕಾರಿಗಳ ಆದೇಶದಂತೆ ಗ್ರಾಮಾಂತರ ಠಾಣಾ ಇನ್‌ಸ್ಪೆಕ್ಟರ್ ಶಿವಕುಮಾರ್, ಪಿಎಸ್‌ಐ ಅರುಣ್ ಕುಮಾರ್, ರಾಮ ನಾಯ್ಕ ಹಾಗೂ ಸಿಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net