ಹಾಥರಸ್​ ಘಟನೆ ಖಂಡಿಸಿ ತಂದೆಯ ಪ್ರತಿಭಟನೆ: ಇತ್ತ ದಲಿತ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಮಗನ ಬಂಧನ!

Youth Arrest
Published on

ಮಂಗಳೂರು: ಹಾಥರಸ್​ನಲ್ಲಿ ನಡೆದಿದೆ ಎನ್ನಲಾದ ಗ್ಯಾಂಗ್​ರೇಪ್​ ಘಟನೆಯನ್ನು ಖಂಡಿಸಿ ಎಸ್​ಡಿಪಿಐ ಸಂಘಟನೆಯ ಮುಖಂಡನೊಬ್ಬ ಪ್ರತಿಭಟನೆ ನಡೆಸುತ್ತಿದ್ದರೆ, ಇತ್ತ ಆತನ ಮಗ ದಲಿತ ಯುವತಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧನವಾಗಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.

ಮೊಹಮ್ಮದ್ ಪೈಝಲ್ ಬಂಧಿತ ಆರೋಪಿ. ಈತ ಪುತ್ತೂರಿನ ಚಿಕ್ಕಮುಡ್ನೂರು ಗ್ರಾಮದ ನಿವಾಸಿ. ನಿನ್ನೆಯಷ್ಟೇ ಆಂಧ್ರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಪೈಝಲ್​ಗೆ ಆಂಧ್ರ​ ಮೂಲದ ಯುವತಿಯೊಬ್ಬಳು ಇನ್​ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದಳು. ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿ ದೈಹಿಕ ಸಂಬಂಧಕ್ಕೂ ಕಾರಣವಾಗಿತ್ತು ಎನ್ನಲಾಗಿದೆ. ಅಲ್ಲದೆ, ಯುವತಿಯ ಭಾವಚಿತ್ರಗಳನ್ನು ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿ, ಕಿರುಕುಳ ನೀಡಿರುವು ಆರೋಪವೂ ಕೇಳಿಬಂದಿದೆ.

ಈ ಸಂಬಂಧ ಯುವತಿ ಆಂಧ್ರ ಪೊಲೀಸರಿಗೆ ದೂರು ನೀಡಿದ್ದಳು. ಹೀಗಾಗಿ ನಿನ್ನೆ ಪುತ್ತೂರಿಗೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿ ಕರೆದೊಯ್ದಿದ್ದಾರೆ. ಇನ್ನೊಂದೆಡೆ ಪೈಝಲ್​ ತಂದೆ ಅಬ್ದುಲ್ ಹಮೀದ್ ಸಾಲ್ಮರ ಎಸ್​ಡಿಪಿಐ ಸಂಘಟನೆಯ ಮುಖಂಡನಾಗಿದ್ದು, ಹಾಥರಸ್​ನಲ್ಲಿ ನಡೆದಿದೆ ಎನ್ನಲಾದ ಗ್ಯಾಂಗ್​ರೇಪ್​ ಘಟನೆಯನ್ನು ಖಂಡಿಸಿ ನಿನ್ನೆ ಪ್ರತಿಭಟನೆ ನಡೆಸುತ್ತಿದ್ದರು. ಇದರ ನಡುವೆ ಮಗನನ್ನು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿಸಿರುವುದು ಪೇಚಿಗೆ ಮುಜುಗರಕ್ಕೀಡುಮಾಡಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net