ಲಾಕ್​ಡೌನ್​ ನಡುವೆಯೂ ಹಾಡಹಗಲಲ್ಲೇ ದಂಪತಿಯ ಬರ್ಬರ ಹತ್ಯೆ

Lockdown
Published on

ಮಂಗಳೂರು: ಹಾಡಹಗಲಲ್ಲೇ ದಂಪತಿಯ ಬರ್ಬರ ಹತ್ಯೆ ಮಾಡಿರುವ ಘಟನೆ ಮಂಗಳೂರಿನ ಹೊರವಲಯದ ಕಿನ್ನಿಗೋಳಿ ಏಳಿಂಜೆಯಲ್ಲಿ ನಡೆದಿದೆ.

ವಿನ್ಸೆಂಟ್ ಡಿಸೋಜ(48), ಪತ್ನಿ ಹೆಲಿನ್ ಡಿಸೋಜ(43) ಹತ್ಯೆಗೊಳಗಾದವರು. ವಿನ್ಸೆಂಟ್ ಸ್ವಯಂ ನಿವೃತ್ತ ಯೋಧರಾಗಿದ್ದರು. ವಿದೇಶಿ ಹಡಗಿನಲ್ಲಿ ಕೆಲಸ ಮಾಡುತ್ತಿದ್ದರು. ನೆರೆ ಮನೆಯ ಅಲ್ಪನ್ಸ್ ಸಲ್ಡಾನ(51) ಕೊಲೆ ಮಾಡಿದ ಆರೋಪಿಯಾಗಿದ್ದು, ಪಿಕಾಸಿ ಹಾಗೂ ಹಾರೆಯಿಂದ ಮನೆ ಮುಂಭಾಗದಲ್ಲೇ ಬರ್ಬರವಾಗಿ ಹತ್ಯೆಗೈಯಲಾಗಿದೆ.

ಮನೆ ಪಕ್ಕದ ಜಾಗಕ್ಕಾಗಿ ನಡೆದ ತಕರಾರು ಹಿನ್ನಲೆಯಲ್ಲಿ‌ ಕೊಲೆ ನಡೆದಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net