ಫೆಬ್ರವರಿ  13-16 ಮಂಜಲಕಟ್ಟೆ ಶ್ರೀ ಕೋರ‌್ದಬ್ಬು ದೈವಸ್ಥಾನ ವಾರ್ಷಿಕ ಸಿರಿ ಸಿಂಗಾರದ ನೇಮೋತ್ಸವ

mng--4 Feb Manjalakatte
Published on

ಮಂಗಳೂರು: ಮಂಜಲಕಟ್ಟೆ ಶ್ರೀ ಕೋರ‌್ದಬ್ಬು ದೈವಸ್ಥಾನ ಕಾವೂರು ಕಂಬೆರ್ಲಕಲದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಪುನರ್ ಪ್ರತಿಷ್ಠೆ, ಶ್ರೀ ಕೋರ‌್ದಬ್ಬು ಮತ್ತು ಪರಿವಾರ ದೈವಗಳ ವಾರ್ಷಿಕ ಸಿರಿ ಸಿಂಗಾರದ ನೇಮೋತ್ಸವ ೆ.13 ರಿಂದ 16ರವರೆಗೆ ನಡೆಯಲಿದೆ.

ಕಂಬೆರ್ಲಕಲದಲ್ಲಿ ೆ.13ರಂದು ಸಂಜೆ 6 ರಿಂದ ಪ್ರಾರ್ಥನೆ, ವಾಸ್ತು ರಕ್ಷೋಘ್ನ ಹೋಮ, ಶುದ್ಧಿ ಕ್ರಿಯೆ, ರಾತ್ರಿ ಗಂಟೆ 7 ಕ್ಕೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.

ೆ.14ರಂದು ಬೆಳಗ್ಗೆ 8 ಗಂಟೆಯಿಂದ ನಡೆಯುವ ಗಣಹೋಮ ಶುದ್ದ, ದರ್ಶನ ಸೇವೆ, ಕಂಬೆರ್ಲಕಲದ ಸರ್ವ ದೈವ ದೇವರುಗಳ ಕಾರ್ಯವು ಬ್ರಹ್ಮಶ್ರೀ ವೇದಮೂರ್ತಿ ವಿಠ್ಠಲದಾಸ್ ತಂತ್ರಿ ದೇರೆಬೈಲು ಅವರ ಪೌರೋಹಿತ್ಯದಲ್ಲಿ ಜರಗಲಿದೆ. ರಾತ್ರಿ 8ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರೀ ಕೋರ‌್ದಬ್ಬು ದೈವಕ್ಕೆ ಬೆಳ್ಳಿಯ ಅಣಿ ಮತ್ತು ಜಕ್ಕೆಲ್ ಅಣಿಯ ಮೆರವಣಿಗೆ ಸಂಜೆ 5 ಗಂಟೆಗೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ದುಗ್ಗನಬೆಟ್ಟು ಶಾಂತಿನಗರದಿಂದ ಹೊರಡಲಿದೆ. ೆ.15ರಂದು ಬೆಳಗ್ಗೆ9ಕ್ಕೆ ಭಂಡಾರ ಏರುವುದು, ರಾತ್ರಿ 8 ರಿಂದ ಮಹಾ ಅನ್ನಸಂತರ್ಪಣೆ, ರಾತ್ರಿ 9ಕ್ಕೆ ಕೋರ‌್ದಬ್ಬು ನೇಮೋತ್ಸವ ಹಾಗೂ ತನ್ನಿಮಾನಿಗ ನೇಮೋತ್ಸವ. ೆ.16ರಂದು ಮಧ್ಯಾಹ್ನ 12 ಗಂಟೆಗೆ ರಾಹುಗುಳಿಗ ನೇಮೋತ್ಸವ, ಎಣ್ಣೆಬೂಲ್ಯ, 1ಕ್ಕೆ ಗಗ್ಗರ ಸೇವೆ, ರಾತ್ರಿ 8ಕ್ಕೆ ಗುಳಿಗ ಪಂಜುರ್ಲಿ ದೈವದ ನೇಮೋತ್ಸವ, ಗಡುಜಾಗಕ್ಕೆ ಮಾರಿಬಲಿ ಹೊರಡುವುದು ನಡೆಯಲಿದೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net