

ಗೋಪಾಲಕೃಷ್ಣ ಪಾದೂರು, ಉಡುಪಿ
ಹೊಸ ಸಾರಿಗೆ ನೀತಿ ಪ್ರಕಾರ 15 ವರ್ಷ ಹಳೆ ಡಿಸೇಲ್ ವಾಹನಗಳ ಪರವಾನಿಗೆ ಹಿಂಪಡೆಯುವುದು ಕಡ್ಡಾಯವಾಗಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರು&ಮಣಿಪಾಲ ವೋಲ್ವೋ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಎಪ್ರಿಲ್ ತಿಂಗಳಿನಿಂದ ಹೊಸ ಎಲೆಕ್ಟ್ರಿಕ್ ಬಸ್ಗಳು ಓಡಾಡಲಿವೆ.
2010ರಲ್ಲಿ ಮೊದಲ ಬಾರಿಗೆ ಮಂಗಳೂರು&ಮಣಿಪಾಲ ಮಧ್ಯೆ 2 ವೋಲ್ವೋ ಬಸ್ ಸಂಚಾರ ಪ್ರಾರಂಭಿಸಲಾಗಿದ್ದು, ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೋವಿಡ್ ಲಾಕ್ಡೌನ್ ಮುಂಚೆ ಸ್ಟೇಟ್ ಬ್ಯಾಂಕ್ &ಮಣಿಪಾಲ ನಡುವಣ 10 ಹವಾನಿಯಂತ್ರಿತ ಬಸ್ಗಳು 25 ಶೆಡ್ಯೂಲ್ಗಳಲ್ಲಿ ಕಾರ್ಯಾಚರಿಸುತ್ತಿದ್ದವು. ಉಡುಪಿ, ಮಣಿಪಾಲದಿಂದ ಮಂಗಳೂರಿಗೆ ಪ್ರಯಾಣಿಸುವ ನಿತ್ಯ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಿತ್ತು. ಬೆಳಗ್ಗೆ ಮತ್ತು ಸಾಯಂಕಾಲ ಸೀಟುಗಳು ಕೂಡ ಭರ್ತಿಯಾಗುತ್ತಿತ್ತು. ಆದರೆ ಬಸ್ಗಳ ನಿರ್ವಹಣೆಗೆ ಸರಿಯಾಗಿ ಆದಾಯ ಬರುತ್ತಿಲ್ಲ ಎಂಬ ಕಾರಣಕ್ಕೆ ಬಸ್ ಸಂಚಾರವನ್ನು ಏಕಾಏಕಿ ಸ್ಥಗಿತಗೊಳಿಸಲಾಗಿತ್ತು. ಬಳಿಕ 2023, ೆಬ್ರವರಿ ತಿಂಗಳಲ್ಲಿ ಮತ್ತೆ 4 ವೋಲ್ವೋ ಬಸ್ ಸೇವೆ ಆರಂಭಿಸಲಾಗಿತ್ತು. ಆದರೆ ೆಟ್ನೆಸ್ ಪ್ರಮಾಣಪತ್ರ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ 10 ತಿಂಗಳ ಬಳಿಕ ಮತ್ತೆ ಬಸ್ ಸಂಚಾರ ನಿಲುಗಡೆಗೊಂಡಿದೆ.
ಎಕ್ಸ್ಪ್ರೆಸ್ ಬಸ್ ಶುರು
ವೋಲ್ವೋ ಬಸ್ ಸಂಚಾರ ಸ್ಥಗಿತಗೊಳಿಸಿದ್ದರೂ ಕೆಎಸ್ಆರ್ಡಿಸಿ ಮಂಗಳೂರು&ಮಣಿಪಾಲ ಮಧ್ಯೆ ಎಕ್ಸ್ಪ್ರೆಸ್ ಬಸ್ ಸೇವೆ ಪ್ರಾರಂಭಿಸಿವೆ. ವೋಲ್ವೋ ಬಸ್ಗೆ ನಿಗದಿಪಡಿಸಿದ್ದ ಸಮಯದಲ್ಲೇ 5 ಬಸ್ಗಳು ಸಂಚರಿಸುತ್ತಿದ್ದು, ಇದರಲ್ಲಿ ಮಹಿಳೆಯರು ಶಕ್ತಿ ಯೋಜನೆ ಪ್ರಯೋಜನವನ್ನು ಪಡೆಯಬಹುದಾಗಿದೆ.
ಮಂಗಳೂರು ವಿಭಾಗಕ್ಕೆ 45 ಇವಿ ಬಸ್
ಹಳೆ ಬಸ್ಗಳನ್ನು ಬದಲಿಸಿ ಇವಿ (ಇಲೆಕ್ಟ್ರಿಕಲ್ ವಹಿಕಲ್) ಬಸ್ಗಳನ್ನು ಸೇರ್ಪಡೆಗೊಳಿಸಲು ಸಾರಿಗೆ ಇಲಾಖೆ ನಿರ್ಧರಿಸಿದ್ದು, ಮಂಗಳೂರು ವಿಭಾಗಕ್ಕೆ 45 ಇವಿ ಬಸ್ ಗಳು ಬರಲಿವೆ. ಈಗಾಗಲೇ ಖರೀದಿ ಪ್ರಕ್ರಿಯೆ ಟೆಂಡರ್ ಹಂತದಲ್ಲಿದ್ದು, 3 ತಿಂಗಳೊಳಗೆ 20 ಎಸಿ ಬಸ್ ಹಾಗೂ 25 ನಾನ್ ಎಸಿ ಬಸ್ಗಳು ಸೇವೆಗೆ ಲಭ್ಯವಾಗಲಿವೆ. ಮಂಗಳೂರು&ಮಣಿಪಾಲ ಮಧ್ಯೆ 10 ಬಸ್, ಮಂಗಳೂರು&ಧರ್ಮಸ್ಥಳ ಮಧ್ಯೆ 20 ಬಸ್, ಮಂಗಳೂರು&ಕಾಸರಗೋಡು ಮಧ್ಯೆ 15 ಬಸ್ ಗಳನ್ನು ರಸ್ತೆಗಿಳಿಸಲು ಕೆಎಸ್ಆರ್ಟಿಸಿ ಚಿಂತನೆ ನಡೆಸಿದೆ. ನಾನ್ ಎಸಿ ಬಸ್ಗಳಲ್ಲಿ ಮಹಿಳೆಯರಿಗೆ ಶಕ್ತಿ ಯೋಜನೆ ಪ್ರಯೋಜನ ಸಿಗಲಿದೆ.
3 ಕಡೆಗಳಲ್ಲಿ ಚಾರ್ಜಿಂಗ್ ಸ್ಟೇಷನ್
ಇವಿ ಬಸ್ಗಳನ್ನು ಚಾರ್ಜಿಂಗ್ ಮಾಡಲು ಅನುಕೂಲವಾಗುವಂತೆ 3 ಕಡೆಗಳಲ್ಲಿ ಚಾರ್ಜಿಂಗ್ ಸ್ಟೇಷನ್ ನಿರ್ಮಿಸಲು ಸ್ಥಳಗುರುತಿಸಲಾಗಿದೆ. ಮಂಗಳೂರು 3ನೇ ಟಕ, ಲಾಲ್ ಭಾಗ್ ಕೆಎಸ್ಆರ್ಟಿಸಿ ನಿಲ್ದಾಣ, ಧರ್ಮಸ್ಥಳ ನಿಲ್ದಾಣದಲ್ಲಿ ಾಸ್ಟ್ ಚಾರ್ಜಿಂಗ್ ಪಾಯಿಂಟ್ ಅಳವಡಿಸಲಾಗುತ್ತದೆ. ಸ್ಟೇಶನ್ ಕಾಮಗಾರಿ ಮುಗಿಯಲು ಕನಿಷ್ಠ 3 ತಿಂಗಳು ಬೇಕಾಗಿದೆ.
ಮಂಗಳೂರು&ಮಣಿಪಾಲ ಬಸ್ಗಳ ನೋಂದಣಿಗೆ 15 ವರ್ಷವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ವಿಭಾಗ ವ್ಯಾಪ್ತಿಯಲ್ಲಿ ಹೊಸದಾಗಿ 45 ಇವಿ ಬಸ್ ಖರೀದಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಇದಕ್ಕೂ ಮುನ್ನ ಎಲ್ಲಾ ಮಾರ್ಗಗಳನ್ನು ಒಳಗೊಳ್ಳುವಂತೆ ಚಾರ್ಜಿಂಗ್ ಸ್ಟೇಶನ್ ಕಾಮಗಾರಿಗಳು ಪೂರ್ಣಗೊಳ್ಳಬೇಕಿದೆ. ಇದರ ಬಳಿಕಷ್ಟೆ ಇವಿ ಬಸ್ಗಳನ್ನು ರಸ್ತೆಗಿಳಿಸಲು ಸಾಧ್ಯ.-ರಾಜೇಶ್ ಶೆಟ್ಟಿವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್ಆರ್ಟಿಸಿ, ಮಂಗಳೂರು