ಚಿನ್ನದ ನಾಣ್ಯ ನೀಡುವುದಾಗಿ ಮಂಗಳೂರಿನ ವ್ಯಕ್ತಿಗೆ ವಂಚನೆ

vinobanagara police station
Published on

ಶಿವಮೊಗ್ಗ: ಚಿನ್ನದ ನಾಣ್ಯ ನೀಡುವುದಾಗಿ ನಂಬಿಸಿದ ವಂಚಕರ ತಂಡವೊಂದು ಮಂಗಳೂರಿನ ವ್ಯಕ್ತಿಗೆ ಬೆದರಿಸಿ 2 ಲಕ್ಷ ರೂ. ಪಡೆದು ಪರಾರಿಯಾಗಿದ್ದಾರೆ.

ಮಂಗಳೂರಿನ ಚೂಡಯ್ಯ ಆಚಾರ್ಯ (67) ವಂಚನೆಗೊಳಗಾದ ವ್ಯಕ್ತಿ. ಅವರ ಮೊಬೈಲ್ ಫೋನ್‌ಗೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ನೆಲ ಅಗೆಯುವಾಗ ಚಿನ್ನದ ನಾಣ್ಯಗಳು ಸಿಕ್ಕಿವೆ. ಅವುಗಳನ್ನು ಮಾರಾಟ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದ್ದ.

ಆತನ ಮಾತು ನಂಬಿದ್ದ ಚೂಡಯ್ಯ ಆಚಾರ್ಯ ವಂಚಕರ ಸೂಚನೆಯಂತೆ ಶಿವಮೊಗ್ಗದ ಹೊರವಲಯ ಅಬ್ಬಲಗೆರೆ ಸಮೀಪದ ಈಶ್ವರ ವನದ ಬಳಿ ಜು.30ರಂದು ಬೆಳಗ್ಗೆ 6.30ಕ್ಕೆ ಆಗಮಿಸಿದ್ದರು. ಈ ವೇಳೆ ಮಹಿಳೆಯೊಂದಿಗೆ ವಂಚಕ ಆಗಮಿಸಿದ್ದ.

ಚೀಲವೊಂದರಲ್ಲಿ ನಾಣ್ಯ ಕೊಟ್ಟು 2 ಲಕ್ಷ ರೂ. ಪಡೆದುಕೊಂಡಿದ್ದಾರೆ. ಈ ವೇಳೆ ಬೈಕ್‌ನಲ್ಲಿ ಆಗಮಿಸಿದ್ದ ವಂಚಕರರು ಬ್ಯಾಗ್ ಚೆಕ್ ಮಾಡಬೇಕೆಂದು ಬೆದರಿಸಿ ತದನಂತರ ಎಲ್ಲರೂ ಸ್ಥಳದಿಂದ ಪರಾರಿಯಾಗಿದ್ದಾರೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net