ಕಾವೂರು ಮುಲ್ಲಕಾಡು 61ನೇ ವರ್ಷದ ವಾರ್ಷಿಕ ಭಜನೋತ್ಸವ ಸಂಪನ್ನ

mng--4 Feb Mullakadu bajana mandira
Published on

ಮಂಗಳೂರು: ಕಾವೂರು ಮುಲ್ಲಕಾಡು ಶ್ರೀ ವಿಠಲ ರುಕುಮಾಯಿ ಭಜನಾ ಮಂದಿರದಲ್ಲಿ 61ನೇ ವರ್ಷದ ವಾರ್ಷಿಕ ಭಜನೋತ್ಸವ ಮಂಗಳವಾರ ಸೂರ್ಯೋದಯದಿಂದ ಆರಂಭಗೊಂಡು ಬುಧವಾರದ ಸೂರ್ಯೋದಯದವರೆಗೆ ನಡೆಯಿತು.

ಬೈಕಂಪಾಡಿ ಭಾರತ್ ಲಾಜಿಸ್ಟಿಕ್‌ನ ಪಾಲುದಾರ ಬಿ.ಸತೀಶ್ ಪೈ ದೀಪ ಬೆಳಗಿಸಿದರು. ಉದ್ಯಮಿ ಸತೀಶ್ ಶೆಟ್ಟಿ, ಹಿರಿಯ ಭಜಕ ಹಾಗೂ ಭಜನಾ ಶಿಕ್ಷಕ ರವಿ ಮಂಜನಾಡಿ, ಮನಪಾ ಸದಸ್ಯೆ ಗಾಯತ್ರಿ ರಾವ್ ಅತಿಥಿಗಳಾಗಿದ್ದರು.

ಶ್ರೀ ವಿಠಲ ರುಕುಮಾಯಿ ಭಜನಾ ಮಂದಿರದ ಗೌರವಾಧ್ಯಕ್ಷ ದೀನದಾಸ್ ಶೆಟ್ಟಿಗಾರ್, ಅಧ್ಯಕ್ಷ ತಿಮ್ಮಪ್ಪ ಯು., ಪ್ರ.ಕಾರ್ಯದರ್ಶಿ ಪ್ರಶಾಂತ್ ಕೆ., ಉಪಾಧ್ಯಕ್ಷ ರಾಮಚಂದ್ರ ಶೆಟ್ಟಿಗಾರ್, ಕೋಶಾಧಿಕಾರಿ ಕೆ.ರಾಮಚಂದ್ರ ಹಾಗೂ ಅರ್ಚಕ ಕೆ.ಕುಮಾರ್,ಮಹಿಳಾ ಮಂಡಳಿಯ ಅಧ್ಯಕ್ಷೆ ತಾರಾದೇವಿ, ಕಾರ್ಯದರ್ಶಿ ಪುಷ್ಪಲತಾ ಮೊದಲಾದವರು ಉಪಸ್ಥಿತರಿದ್ದರು.

ಬುಧವಾರ ಸೂರ್ಯೋದಯದ ವೇಳೆ ಮಹಾಮಂಗಳಾರತಿ ನಡೆಯಿತು. ಮಧ್ಯಾಹ್ನ 12 ಗಂಟೆಯಿಂದ 3ರ ತನಕ ಅನ್ನ ಸಂತರ್ಪಣೆ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net