ಸಾಹಿತ್ಯ ಸೇವೆಯನ್ನು ಗುರುತಿಸಿರುವುದು ಸಂತೋಷ ನೀಡಿದೆ - ಸನ್ಮಾನ ಸ್ವೀಕರಿಸಿ ಹಿರಿಯ ಸಾಹಿತಿ ಬಿ. ಸುಲೋಚನಾ ಹರ್ಷ

mng--5 Feb Ka sa pa
Published on

ಮಂಗಳೂರು: ಸಾಹಿತ್ಯ ಸೇವೆಯನ್ನು ಗುರುತಿಸಿ ಮನೆಗೆ ಬಂದು ಸನ್ಮಾನ ಮಾಡಿರುವುದು ಸಂತೋಷ ಉಂಟು ಮಾಡಿದೆ. ಇದಕ್ಕಿಂತ ದೊಡ್ಡ ಪುರಸ್ಕಾರ ಬೇರೆ ಬೇಕಿಲ್ಲ ಎಂದು ನಿವೃತ್ತ ಶಿಕ್ಷಕಿ, ಹಿರಿಯ ಸಾಹಿತಿ ಬಿ. ಸುಲೋಚನಾ ಹರ್ಷ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು - ಮಂಗಳೂರು ತಾಲೂಕು ಘಟಕ, ಹಿರಿಯ ಸಾಹಿತಿಗಳ ಮನೆಗೆ ಭೇಟಿ ಕಾರ್ಯಕ್ರಮದಡಿ ನಗರದ ಉರ್ವ ಪರಿಸರದ ಅವರ ನಿವಾಸದಲ್ಲಿ ಭೇಟಿಯಾಗಿ ಸಲ್ಲಿಸಿದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕವಿ ಕಯ್ಯರರ ವಿದ್ಯಾರ್ಥಿಯಾಗಿದ್ದು, ಅವರ ಪ್ರೇರಣೆಯಿಂದ ಬರೆಯಲು ಆರಂಭಿಸಿದ್ದರೂ ನಿವೃತ್ತಿಯ ಬಳಿಕವಷ್ಟೇ ಮೂರು ಕೃತಿಗಳನ್ನು ಹೊರ ತರಲು ಸಾಧ್ಯವಾಗಿದೆ. ಮನೆಯವರ, ಬಂಧುಗಳ ಸಹಕಾರ ಮತ್ತು ಮಂಗಳೂರಿನ ಸಾಹಿತ್ಯಿಕ ವಾತಾವರಣ ಹೆಚ್ಚಿನ ಖುಷಿ ನೀಡಿದೆ ಎಂದರು.

ಘಟಕದ ಪದಾಧಿಕಾರಿ ಹಾಗೂ ಕ ಸಾ ಪ ವಿದೇಶೀ ರಾಯಭಾರಿ ಡಾ.ಮುರಲೀಮೋಹನ್ ಚೂಂತಾರು ಸುಲೋಚನಾ ಅವರನ್ನು ಅಭಿನಂದಿಸಿ ಮಾತನಾಡಿ, ಎಲೆ ಮರೆಯ ಸಾಧಕರನ್ನು ಗುರುತಿಸುವುದು, ಹಿರಿಯರನ್ನು ಇಂದಿನ ಯುವ ಜನತೆಗೆ ಪರಿಚಯಿಸಿ ಪ್ರೇರಣೆ ನೀಡುವುದು ನಮ್ಮ ಮನೆ ಮನೆ ಭೇಟಿ ಕಾರ್ಯಕ್ರಮದ ಉದ್ದೇಶ. ಇದರಿಂದ ಸಿಗುವ ತೃಪ್ತಿ ಅವರ್ಣನೀಯ ಎಂದು ವಿವರಿಸಿದರು.

ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ ಶುಭ ಹಾರೈಸಿದರು.

ಜಿಲ್ಲಾ ಸಮಿತಿಯ ಅರುಣಾ ನಾಗರಾಜ್, ಸನತ್ ಕುಮಾರ್ ಜೈನ್ ಅಲ್ಲದೆ ಘಟಕದ ರತ್ನಾವತಿ ಜೆ ಬೈಕಾಡಿ, ಡಾ.ಮೀನಾಕ್ಷಿ ರಾಮಚಂದ್ರ, ಗುರು ಪ್ರಸಾದ್, ಸುಲೋಚನಾ ಅವರ ಪತಿ ಪುರುಷೋತ್ತಮ ರಾವ್, ಸೊಸೆ ಲತಾ ಎಸ್. ರಾವ್, ಮೊಮ್ಮಗಳು ಸಂಜನಾ, ಬಂಧುಗಳಾದ ಪ್ರೇಮಾ ಸೀತಾರಾಮ್, ನಿವೃತ್ತ ಶಿಕ್ಷಕಿ ರತ್ನಾವತಿ, ವಿದ್ಯಾ ಆರ್. ರಾವ್ ಉಪಸ್ಥಿತರಿದ್ದರು.

ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net