ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಮಳೆಗಾಲಕ್ಕೆ ಸಿದ್ಧ

mng-- 11 july Airport
Published on

ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸುಸಜ್ಜಿತ ಒಳಚರಂಡಿಗಳ ಜಾಲ ಹಾಗೂ ಇತರೆ ವ್ಯವಸ್ಥೆಗಳನ್ನು ಮಾಡುವ ಮೂಲಕ ಮಳೆಗಾಲದ ಸಂಭಾವ್ಯ ಪರಿಸ್ಥಿತಿ ಎದುರಿಸಲು ಸಿದ್ಧವಾಗಿದೆ.


ಕರ್ನಾಟಕದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದ ಐದು ಟೇಬಲ್‌ಟಾಪ್ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಸರಾಸರಿ ಸಮುದ್ರ ಮಟ್ಟದಿಂದ 337 ಅಡಿ ಎತ್ತರದಲ್ಲಿರುವ ವಿಮಾನ ನಿಲ್ದಾಣವು, ಹಚ್ಚ ಹಸಿರಿನ ಕಾಡಿನಿಂದ ಸುತ್ತುವರಿದಿದ್ದು, ಮಾನ್ಸೂನ್ ಅವಧಿಯಲ್ಲಿ ಗಣನೀಯ ಪ್ರಮಾಣದ ಮಳೆಯನ್ನು ಆಕರ್ಷಿಸುತ್ತದೆ.


ಮಂಗಳೂರು ವಿಮಾನ ನಿಲ್ದಾಣವು ಕಾರ್ಯನಿರ್ವಹಿಸಲು ಒಳಚರಂಡಿ ಜಾಲದ ನಿಗದಿತ ನಿರ್ವಹಣೆ ನಿರ್ಣಾಯಕವಾಗಿದೆ. ವಿಮಾನ ನಿಲ್ದಾಣವು ಪ್ರತಿ ವರ್ಷ ಏಪ್ರಿಲ್‌ನಲ್ಲಿ ಚರಂಡಿಗಳ ಮೇಲೆ ಪೂರ್ವ ಮಾನ್ಸೂನ್ ತಪಾಸಣೆಗಳನ್ನು ಪ್ರಾರಂಭಿಸುತ್ತದೆ. ಮಳೆ ಪ್ರಾರಂಭವಾಗುವ ಮೊದಲು ಬದಿಗಳ ಹೂಳು/ಜಾರುವಿಕೆಯನ್ನು ಸರಿಪಡಿಸಲಾಗಿದೆಯೆ ಎಂದು ಎಲ್ಲಾ ತೆರೆದ ಚರಂಡಿಗಳ ತಪಾಸಣೆಯನ್ನು ನಡೆಸಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net