ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅತ್ಯಾಧುನಿಕ ಭದ್ರತಾ ಉಪಕರಣ ಸೇರ್ಪಡೆ

mng--31 July Airport
Published on

ಮಂಗಳೂರು: ಅದಾನಿ ಸಮೂಹದ ಅಂಗಸಂಸ್ಥೆಯಾದ ಅದಾನಿ ಏರ್ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ ನಿರ್ವಹಿಸುತ್ತಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಫ್) ಗೆ ಒದಗಿಸಲಾದ ಸುಧಾರಿತ ಉಪಕರಣಗಳನ್ನು ಹಸ್ತಾಂತರಿಸುವ ಮೂಲಕ ವಿಮಾನ ನಿಲ್ದಾಣದ ಭದ್ರತಾ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಿದೆ.


ಹೊಸ ಉಪಕರಣಗಳಲ್ಲಿ ತ್ವರಿತ ಪ್ರತಿಕ್ರಿಯೆ ತಂಡ, ಗುಂಡು ನಿರೋಧಕ ವಾಹನ ಮತ್ತು ಅತ್ಯಾಧುನಿಕ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಉಪಕರಣಗಳು ಸೇರಿವೆ.


ಭದ್ರತಾ ಸಾಮರ್ಥ್ಯಗಳ ಗಮನಾರ್ಹ ಹೆಚ್ಚಳದಲ್ಲಿ, ವಿಮಾನ ನಿಲ್ದಾಣವು ಶಂಕಿತ ಲಗೇಜ್ ಕಂಟೇನ್ಮೆಂಟ್ ವಾಹನ, ಮಿನಿಯೇಚರ್ ರಿಮೋಟ್ ಆಪರೇಟೆಡ್ ವೆಹಿಕಲ್, ಐಆರ್ ಇಲ್ಯುಮಿನೇಟರ್ ಮತ್ತು ರೇಂಜ್ ಫೈಂಡರ್ ಹೊಂದಿರುವ ನೈಟ್ ವಿಷನ್ ಬೈನಾಕ್ಯುಲರ್‌ಗಳನ್ನು ಸಿಐಎಸ್‌ಎಫ್‌ಗೆ ಹಸ್ತಾಂತರಿಸಿತು. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಲ್ಯಾಂಡ್ರೈಡ್ ಸೆಕ್ಯುರಿಟಿ ತಂಡವು ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪಡೆದಿದೆ. ಇದನ್ನು ವಿಮಾನ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ರಸ್ತೆಗಳಲ್ಲಿ ಗಸ್ತು ತಿರುಗಲು ಬಳಸಲಾಗುತ್ತದೆ.


ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ವಿಮಾನ ನಿಲ್ದಾಣ ಅಧಿಕಾರಿ ಮುಖೇಶ್ ನಂಕಣಿ ಅವರು ಸಿಐಎಸ್‌ಎಫ್‌ನ ಹಿರಿಯ ಕಮಾಂಡೆಂಟ್ ಮತ್ತು ಮುಖ್ಯ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿ ವೀರೇಂದ್ರ ಮೋಹನ್ ಜೋಶಿ ಅವರಿಗೆ ಎಎಎಚ್‌ಎಲ್‌ಮ ಮುಖ್ಯ ಭದ್ರತಾ ಅಧಿಕಾರಿ ವಿಜಿತ್ ಜುಯಾಲ್ ಮತ್ತು ವಿಮಾನ ನಿಲ್ದಾಣದ ನಾಯಕತ್ವ ತಂಡದ ಉಪಸ್ಥಿತಿಯಲ್ಲಿ ಗುಂಡು ನಿರೋಧಕ ವಾಹನದ ಸಾಂಕೇತಿಕ ಕೀಲಿಯನ್ನು ಹಸ್ತಾಂತರಿಸಿದರು.


ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತ್ಯುನ್ನತ ಮಟ್ಟದ ಸುರಕ್ಷತೆ ಮತ್ತು ಭದ್ರತೆಗೆ ಆದ್ಯತೆ ನೀಡಲಾಗಿದೆ. ಈ ಸುಧಾರಿತ ಭದ್ರತಾ ಕ್ರಮಗಳನ್ನು ಅಳವಡಿಸಿರುವುದು ಪ್ರಯಾಣಿಕರ ಸುರಕ್ಷತೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲಿದೆ ಎಂದು ನಂಕನಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net