ಮಂಗಳೂರು ಅಂ.ರಾ. ವಿಮಾನ ನಿಲ್ದಾಣದ ಜ್ಯಾಕ್‌ಗೆ ಕಣ್ಣೀರಿನ ವಿದಾಯ

mng---22 Nov Airport Jack
Published on

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಏರ್‌ಪೋರ್ಟ್ ಸೆಕ್ಯುರಿಟಿ ಗ್ರೂಪ್‌ನ ಶ್ವಾನದಳದಲ್ಲಿ ವಿಶೇಷ ಸೇವೆ ಸಲ್ಲಿಸಿದ್ದ 12 ವರ್ಷದ ಲ್ಯಾಬ್ರಡಾರ್ ಜ್ಯಾಕ್‌ಗೆ ಕಣ್ಣೀರಿನ ವಿದಾಯ ಕೋರಲಾಯಿಉತು.

ಜ್ಯಾಕ್ ದಶಕದ ಹಿಂದೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಕೆ9 ತಂಡವನ್ನು ಸೇರಿಕೊಂಡಿತ್ತು. ವಿಮಾನ ನಿಲ್ದಾಣದ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುವಲ್ಲಿ ತೀಕ್ಷ್ಣವಾದ ಇಂದ್ರಿಯಗಳು ಮತ್ತು ಶ್ರದ್ಧೆಯ ಕಾರ್ಯನೀತಿಯು ನಿರ್ಣಾಯಕ ಪಾತ್ರವನ್ನು ವಹಿಸಿತು. ಎಲ್ಲರಿಗೂ ಅಚ್ಚುಮೆಚ್ಚಿನ ಶ್ವಾನವಾಗಿತ್ತು.

ಜ್ಯಾಕ್‌ನ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಿ ಉಪ ಕಮಾಂಡೆಂಟ್ ಎಸ್.ಎಂ. ಮೈಟೆಯ್ ನೇತೃತ್ವದ ಸಿಐಎಸ್‌ಫ್ ತಂಡವು ಜ್ಯಾಕ್‌ಗೆ ಅಂತಿಮ ವಿದಾಯ ಕೋರಿದರು. ನಿವೃತ್ತಿಯ ನಂತರ ಅದನ್ನು ಆರೈಕೆ ಮಾಡಿದ ಸಿಬ್ಬಂದಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net