ಮಂಗಳೂರು ಹವ್ಯಕ ಸಭಾ ಪೂಜೆ, ವೈದಿಕ ಸನ್ಮಾನ

sanmana
ಮಂಗಳೂರು ಹವ್ಯಕ ಸಭಾದ ವತಿಯಿಂದ ವೈದಿಕ ಕೃಷ್ಣ ಭಟ್ ದಂಪತಿಯನ್ನು ಸನ್ಮಾನಿಸಲಾಯಿತು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಅಶೋಕ್ ಹಾರ್ನಳ್ಳಿ, ಶ್ರೀ ರಾಮಚಂದ್ರಾಪುರಮಠದ ಚಂದ್ರಮೌಳೀಶ್ವರ ದೇವಸ್ಥಾನ ಆಡಳಿತ ಮಂಡಳಿಯ ಹರಿಪ್ರಸಾದ್ ಪೆರಿಯಪ್ಪು, ಕಟೀಲು ದೇವಸ್ಥಾನದ ಅರ್ಚಕರಾದ ಹರಿನಾರಾಯಣ ಆಸ್ರಣ್ಣ, ನಿಕಟಪೂರ್ವ ಅಧ್ಯಕ್ಷ ಡಾ. ರಾಜೇಂದ್ರ ಪ್ರಸಾದ್ ಮೊದಲಾದವರಿದ್ದರು.
Published on

ಮಂಗಳೂರು: ನಂತೂರು ಶ್ರೀ ಭಾರತೀ ಕಾಲೇಜು ಆವರಣದಲ್ಲಿರುವ ಶಂಕರಶ್ರೀ ಸಭಾಭವನದಲ್ಲಿ ಮಂಗಳೂರು ಹವ್ಯಕ ಸಭಾ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವೈದಿಕ ಸನ್ಮಾನ ಕಾರ್ಯಕ್ರಮ ಜರುಗಿತು.

ಹವ್ಯಕ ಸಭಾ ಅಧ್ಯಕ್ಷೆ ಗೀತಾದೇವಿ ಚೂಂತಾರು ಅಧ್ಯಕ್ಷತೆ ವಹಿಸಿದ್ದರು. ವೈದಿಕ ಕೃಷ್ಣ ಭಟ್ ದಂಪತಿಯನ್ನು ಸನ್ಮಾನಿಸಲಾಯಿತು. ವೈದಿಕರಾದ ಶಿವಪ್ರಸಾದ್ ಅಮೈ ವಸಂತ ವೇದಪಾಠ ಶಿಬಿರದ ಬಗ್ಗೆ ಮಾಹಿತಿ ನೀಡಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ, ಶ್ರೀ ರಾಮಚಂದ್ರಾಪುರ ಮಠದ ಚಂದ್ರಮೌಳೀಶ್ವರ ದೇವಸ್ಥಾನ ಆಡಳಿತ ಮಂಡಳಿಯ ಹರಿಪ್ರಸಾದ್ ಪೆರಿಯಪ್ಪು, ಕಟೀಲು ದೇವಸ್ಥಾನ ಅರ್ಚಕ ಹರಿನಾರಾಯಣ ಆಸ್ರಣ್ಣ, ನಿಕಟಪೂರ್ವ ಅಧ್ಯಕ್ಷ ಡಾ.ರಾಜೇಂದ್ರ ಪ್ರಸಾದ್, ದ.ಕ. ಹಾಗೂ ಕಾಸರಗೋಡು ಹವ್ಯಕ ಮಹಾಜನ ಸಭಾ ಅಧ್ಯಕ್ಷ ನಿಡುಗಳ ಕೃಷ್ಣ ಭಟ್, ಭಾರತಿ ಸೌಹಾರ್ದ ಸೊಸೈಟಿ ಅಧ್ಯಕ್ಷ ಜಿ.ಕೆ ಭಟ್ ಕೊಣಾಜೆ ಮತ್ತಿತರರು ಉಪಸ್ಥಿತರಿದ್ದರು.

ಉಪಾಧ್ಯಕ್ಷೆ ಸುಮಾ ರಮೇಶ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಶ್ರೀಕೃಷ್ಣ ನೀರಮೂಲೆ ಸನ್ಮಾನಿತರನ್ನು ಪರಿಚಯಿಸಿದರು. ಜತೆ ಕಾರ್ಯದರ್ಶಿ ಮಮತಾ ಪ್ರಶಸ್ತಿ ಪತ್ರ ವಾಚಿಸಿದರು. ಕಾರ್ಯದರ್ಶಿ ಮೀರಾ ಭಟ್ ವಂದಿಸಿದರು. ಭಾಸ್ಕರ ಹೊಸಮನೆ ಕಾರ್ಯಕ್ರಮ ನಿರೂಪಿಸಿದರು. ಶಿವಪ್ರಸಾದ ಭಟ್ ಅಮೈ ನೇತೃತ್ವದಲ್ಲಿ ಹವ್ಯಕ ಸಭಾದ ನಿಕಟಪೂರ್ವ ಅಧ್ಯಕ್ಷ ಡಾ.ಬಿ.ರಾಜೇಂದ್ರ ಪ್ರಸಾದ್ ದಂಪತಿ ಗಣಪತಿ ಹವನ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net