ಮಂಗಳೂರು ಉದ್ರೇಕಕಾರಿ ಸಂದೇಶ ಪ್ರಕರಣ ದಾಖಲು

insta
Published on

ಮಂಗಳೂರು: ಕೊಲೆಯಾದ ಸುಹಾಸ್ ಶೆಟ್ಟಿ ಫೋಟೊ ಹಾಕಿ ಉದ್ರೇಕಕಾರಿ ಮತ್ತು ಪ್ರಚೋದನಾಕಾರಿಯಾಗಿ ಸಂದೇಶ ಹಾಕಿದ್ದ ಉಡುಪಿ ನಿವಾಸಿ ಅಖಿಲೇಶ್ (26) ಎಂಬಾತನ ವಿರುದ್ಧ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಹಾಸ್ ಶೆಟ್ಟಿ ಪೋಟೊ ಹಾಕಿ ವಿಎಚ್‌ಪಿ ಭಜರಂಗದಳ ಅಶೋಕನಗರ ಮತ್ತು ಶಂಖನಾದ ಎಂಬ ಎರಡು ಇನ್ ಸ್ಟಾಗ್ರಾಮ್ ಖಾತೆಗಳಲ್ಲಿ ವಿವಿಧ ಧರ್ಮ ಹಾಗೂ ವರ್ಗಗಳ ಜನರಲ್ಲಿ ದ್ವೇಷದ ಭಾವನೆ ಹುಟ್ಟುಹಾಕಿ ಅಪರಾಧ ಕೃತ್ಯ ವೆಸಗುವಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿ, ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ದ್ವೇಷಭಾವನೆ ಹುಟ್ಟುವಂತೆ ಪೋಸ್ಟ್ ಮಾಡಿದ್ದ. ಈ ಪ್ರಕರಣವನ್ನು ಮುಂದಿನ ತನಿಖೆಯ ಸಲುವಾಗಿ ಮಂಗಳೂರು ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net