ಯೆಯ್ಯಡಿ ಬೈಕ್ ಸ್ಕಿಡ್ ಇಬ್ಬರು ಯುವಕರು ಮೃತ್ಯು, ಲಾರಿ ಚಾಲಕನ ನಿರ್ಲಕ್ಷೃವೇ ಘಟನೆಗೆ ಕಾರಣ

mng--6 sep accidentt
Published on

ಮಂಗಳೂರು: ಯೆಯ್ಯಡಿ ಹರಿಪದವು ಕ್ರಾಸ್‌ನಲ್ಲಿ ಶುಕ್ರವಾರ ಬೆಳಗ್ಗಿನ ಜಾವ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ಇಬ್ಬರು ಯುವಕರು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.


ಬೈಕ್ ಸವಾರ ರಾಮಕುಂಜ ನಿವಾಸಿ ಚೇತನ್ (24) ಹಾಗೂ ಸಹ ಸವಾರ ಕೋಡಿಕಲ್ ನಿವಾಸಿ ಕಾಶೀನಾಥ್ (17) ಮೃತಪಟ್ಟವರು. ಬೆಳಗ್ಗಿನ ಜಾವ 2.30 ಗಂಟೆಗೆ ಅಪಘಾತ ಸಂಭವಿಸಿದೆ.


ಬೈಕ್ ಸವಾರರು ಪದವಿನಂಗಡಿ ಕಡೆಯಿಂದ ಯೆಯ್ಯಡಿ ಕಡೆಗೆ ಸಂಚರಿಸುತ್ತಿದ್ದಾಗ ಹರಿಪದವು ಕ್ರಾಸ್‌ನಲ್ಲಿ ಲಾರಿಯೊಂದು ಹಿಂದಕ್ಕೆ ನಿಧಾನವಾಗಿ ಚಲಿಸುತ್ತಿತ್ತು. ಈ ಸಂದರ್ಭ ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಬೈಕ್ ಸಮೇತ ಕಾಂಕ್ರೀಟು ರಸ್ತೆಗೆ ಬಿದ್ದಿದ್ದಾರೆ. ಹೆಲ್ಮೆಟ್ ಕೂಡಾ ಧರಿಸಿಲ್ಲದ ಕಾರಣ ತಲೆಗೆ ಗಂಬೀರ ಗಾಯಗೊಂಡಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು. ಮಂಗಳೂರು ನಗರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ರೂಮ್‌ಗೆ ತೆರಳುತ್ತಿದ್ದಾಗ ದುರ್ಘಟನೆ: ಶಕ್ತಿನಗರದ ಬಾರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರು ಕೆಲಸ ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ. ರಾಮಕುಂಜದ ಚೇತನ್ ಉರ್ವಾಸ್ಟೋರ್‌ನಲ್ಲಿ ಬಾಡಿಗೆ ರೂಮ್‌ನಲ್ಲಿ ವಾಸವಿದ್ದರು. ಬಾರ್‌ನಲ್ಲಿ ಇವರು ಕ್ಯಾಶಿಯರ್ ಆಗಿದ್ದರು. ಕಾಶಿನಾಥ್ ಕ್ಲೀನಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಚೇತನ್ ತಂದೆ, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ. ಕಾಶಿನಾಥ್ ತಂದೆ, ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net