ವೆನ್ಲಾಕ್ ಅಪೌಷ್ಠಿಕತೆ, ರಕ್ತಹೀನತೆ ವಿಷಯದಲ್ಲಿ ಕಾರ್ಯಾಗಾರ

mng--14 Feb wenlock workshop
Published on

ಮಂಗಳೂರು: ಪ್ರಾಜೆಕ್ಟ್ ಸುಪೋಶನ್, ಅದಾನಿ ವಿಲ್ಮಾರ್ ಲಿಮಿಟೆಡ್, ಅದಾನಿ ಫೌಂಡೇಶನ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಭಾಗಿತ್ವದಲ್ಲಿ ವೆನ್‌ಲಾಕ್ ಆಸ್ಪತ್ರೆಯ ಆರ್‌ಎಪಿಸಿ ಸಭಾಂಗಣದಲ್ಲಿ ಪೌಷ್ಠಿಕತೆ, ಅಪೌಷ್ಠಿಕತೆ, ಸ್ತನ್ಯಪಾನ, ಎನ್‌ಆರ್‌ಸಿ ಕೇಂದ್ರಕ್ಕೆ ಮಕ್ಕಳ ದಾಖಲಾತಿ ಕುರಿತು ಕಾರ್ಯಾಗಾರ ಬುಧವಾರ ನಡೆಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಕಾರ್ಯಾಗಾರ ಉದ್ಘಾಟಿಸಿದರು. ಅದಾನಿ ಫೌಂಡೇಶನ್ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಂಗನವಾಡಿ ಕೇಂದ್ರಗಳ ಹಂತದಲ್ಲಿ ಮಕ್ಕಳಲ್ಲಿರುವ ಅಪೌಷ್ಠಿಕತೆ ಮತ್ತು ಹದಿಹರೆಯದ ಹುಡುಗಿಯರಲ್ಲಿ ಮತ್ತು ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ರಕ್ತಹೀನತೆ ಕಡಿಮೆ ಮಾಡುವ ನಿಟ್ಟಿನಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಕೆ.ಎಂ.ಸಿ ಆಸ್ಪತ್ರೆಯ ಸಮುದಾಯ ಔಷಧ ವಿಭಾಗದ ಸಹಾಯಕ ಪ್ರಧ್ಯಾಪಕ ಡಾ.ರಜತ್ ರಾವ್, ಆಹಾರ ತಜ್ಞ ಡಾ.ಆದರ್ಶ ಗೌಡ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಜೀವನ ಚಕ್ರ, ಗರ್ಭದಾರಣೆ, ಹೆರಿಗೆಯ ಅವಧಿ ಮತ್ತು ಪ್ರಸವದ ನಂತರದ ಬೆಳವಣಿಗೆ ಮೊದಲಾದ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಧಿಕಾರಿ ರಶ್ಮೀ ಕೆ.ಎಂ., ಪೌಷ್ಠಿಕ ಆಹಾರ ಪುನಶ್ಚೇತನ ಕೇಂದ್ರದ ವೈದ್ಯಕೀಯ ಅಧಿಕಾರಿ ಡಾ. ದೀಕ್ಷಾ ಎಂ., ಅದಾನಿ ವಿಲ್ಮಾರ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮಿಥುನ್ ಕುಮಾರ್ ಮೊದಲಾದವರಿದ್ದರು.

ಅದಾನಿ ಫೌಂಡೇಶನ್‌ನ ಸುಪೋಷನ್ ಅಧಿಕಾರಿ ಡಾ.ಪ್ರೇಮಾ ಡಿಸೋಜ ಪ್ರಸ್ತಾವನೆಗೈದರು. ಅಸಿಸ್ಟೆಂಟ್ ಸುಪೋಷನ್ ಅಧಿಕಾರಿ ಚೈತ್ರಾ ಕಾರ್ಯಕ್ರಮ ನಿರೂಪಿಸಿದರು. ರೋಶನಿ ಡಿಸೋಜ ಸ್ವಾಗತಿಸಿದರು. ಮಿಥುನ್ ಕುಮಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net