ಮಂಗಳೂರು ವಿವಿ ಹೊಸ ಪದವಿ ಕೋರ್ಸ್ ಅರ್ಜಿ ಆಹ್ವಾನ

IMG-20220917-WA0017
Published on

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್, ಮಂಗಳಗಂಗೋತ್ರಿಯಲ್ಲಿ 2022-23ನೇ ಶೈಕ್ಷಣಿಕ ವರ್ಷಕ್ಕೆ ಬಿ.ಎಸ್ಸಿ ಯೋಗ ವಿಜ್ಞಾನ (ಮಲ್ಟಿ-ಡಿಸಿಪ್ಲಿನರಿ) ಮತ್ತು ಬಿ.ಎಸ್ಸಿ ಭೂಗೋಳ (ಮಲ್ಟಿ-ಡಿಸಿಪ್ಲಿನರಿ) ಸ್ನಾತಕ ಪದವಿ ಕಾರ್ಯಕ್ರಮಗಳಿಗೆ (ಸೆಮಿಸ್ಟರ್ ಆಧಾರಿತ ವ್ಯವಸ್ಥೆ) ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಯುಯುಸಿಎಂಎಸ್ ಲಿಂಕ್ ಬಳಸಿ (https://uucms.karnataka.gov.in/Login/Index) ಸೆಪ್ಟೆಂಬರ್ 23, 2022 ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗಾಗಿ, ಡಾ. ಕೆ ಕೃಷ್ಣ ಶರ್ಮಾ, ಅಧ್ಯಕ್ಷರು, ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ (94482 41005) ಅಥವಾ ಡಾ. ದಶರಥ ಪಿ ಅಂಗಡಿ, ಭೂಗೋಳಶಾಸ್ತ್ರ ವಿಭಾಗ (94488 89201) ಇವರನ್ನು ಸಂಪರ್ಕಿಸಬಹುದಾಗಿದೆ, ಎಂದು ವಿಶ್ವವಿದ್ಯಾನಿಲಯದ ಕುಲಸಚಿವರ ಪತ್ರಿಕಾ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net