ಸಂಸ್ಕೃತಿ, ಸಂಸ್ಕಾರ ಜೀವಂತ ವಿಶ್ವ ಕೊಂಕಣಿ ಕೇಂದ್ರದಲ್ಲಿ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರ

mng--10 Aug vishwa konkani
Published on

ಮಂಗಳೂರು: ಕೊಂಕಣಿ ಭಾಷೆಯನ್ನು ನಮ್ಮ ಸಂಪರ್ಕ ಭಾಷೆಯನ್ನಾಗಿಸಿದಾಗ ಭಾವನೆಗಳು, ಆಲೋಚನೆಗಳಿಂದ ಸಂಸ್ಕೃತಿ ಸಂಸ್ಕಾರವನ್ನು ಜೀವಂತವಾಗಿಡಲು ಸಾಧನವಾಗಿರುತ್ತದೆ ಎಂದು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿಎ ನಂದ ಗೋಪಾಲ ಶೆಣೈ ಹೇಳಿದರು.


ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ್ ಗೌಡ್ ಬ್ರಾಹ್ಮಣ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಕುಡಾಳ್ ದೇಶ್ಕರ್ ಸಮುದಾಯದ ಸ್ನಾತಕೋತ್ತರ, ಇಂಜಿನಿಯರಿಂಗ್, ಪದವಿ ಮತ್ತು ತತ್ಸಮಾನ ವಿದ್ಯಾರ್ಥಿಗಳಿಗೆ ವಸತಿ ಸಹಿತ ನಾಲ್ಕು ದಿನಗಳ ಚಟುವಟಿಕೆ ಆಧಾರಿತ ’ಉನ್ನತಿ -2024’ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.


ಕೊಂಕಣಿ ಭಾಷೆಯು ನಮ್ಮ ವೈಯಕ್ತಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಗುರುತನ್ನು ಒಳಗೊಂಡಿದೆ. ಕೊಂಕಣಿ ಭಾಷೆಯು ನಮ್ಮ ಮಾತೃಭಾಷೆಯಾಗಿದ್ದು ತಾಯಿ ಬೇರಿನಂತೆ ನಮ್ಮ ಸಂಪ್ರದಾಯಗಳು ಸಾಂಸ್ಕೃತಿಕ ಮೌಲ್ಯಗಳು ನಮ್ಮ ಸಮುದಾಯದಲ್ಲಿ ಬೇರೂರುವಂತೆ, ನಮ್ಮ ಸಮುದಾಯದ ತಳಪಾಯವನ್ನು ಬಲಿಷ್ಠಗೊಳಿಸುತ್ತದೆ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.


ಕಾರ್ಯಾಗಾರವನ್ನು ವಿಶ್ವ ಕೊಂಕಣಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಡಾ. ಕಸ್ತೂರಿ ಮೋಹನ್ ಪೈ ಉದ್ಘಾಟಿಸಿದರು. ಶಿಕ್ಷಣವೆಂದರೆ ಒಂದು ಮಗುವಿನ ಸರ್ವತೋಮುಖ ಅಭಿವೃದ್ಧಿ, ಇಲ್ಲಿ ಜ್ಞಾನಾತ್ಮಕ ವಲಯದ ಅಭಿವೃದ್ಧಿಯ ಜೊತೆಗೆ ಮನೋಜನ್ಯ ಕೌಶಲ್ಯಗಳು ಸಮಯಕ್ಕೆ ಅನುಗುಣವಾಗಿ ಬೆಳೆಸಿಕೊಳ್ಳಬೇಕು, ಇದು ನಮ್ಮಲ್ಲಿ ಆತ್ಮವಿಶ್ವಾಸವನ್ನು ಗಟ್ಟಿಗೊಳಿಸುತ್ತದೆ, ಇಂತಹ ಶಿಬಿರಗಳು ಈ ರೀತಿಯಲ್ಲಿ ಹೆಚ್ಚು ಪರಿಣಾಮಕಾರಿ ಎಂದರು.
ವಿಶ್ವ ಕೊಂಕಣಿ ಕೇಂದ್ರದ ಕೋಶಾಧಿಕಾರಿ ಬಿ. ಆರ್. ಭಟ್ ಅವರು , ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಳಲ್ಲಿ ಅಂಕ ಗಳಿಸುವುದರಿಂದ ಮಾತ್ರ ಬೆಳೆಯೋದಿಲ್ಲ ಅದರ ಜೊತೆಯಲ್ಲಿ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು, ಅಂಕಗಳೊಂದಿಗೆ ಕೌಶಲ್ಯ ಸೇರಿದಾಗ ಮಾತ್ರ ಅದು ಪರಿಪೂರ್ಣವಾಗುತ್ತದೆ ಎಂದರು.


ಕೆಪಿಟಿಸಿಎಲ್ ಮಂಗಳೂರಿನ ಶ್ರೀ ರಾಘವೇಂದ್ರ ಶೆಣೈ ಡೆಚ್ಚಾರು ಶುಭ ಹಾರೈಸಿದರು.
ಬಾಲಕೃಷ್ಣ ಪ್ರಭು ಕೆಂಚಪಾಲು ಹಾಗೂ ಶೈಲಜಾ ಬಾಲಕೃಷ್ಣ ಪ್ರಭು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿ ಹಾರೈಸಿದರು. ಆರ್ಕಿಟೆಕ್ಟ್ ದಿವಾಕರ್ ಶೆಣೈ ಮರೋಳಿ ಹಾಗೂ ಸಿವಿಲ್ ಕಾಂಟ್ರಾಕ್ಟರ್ ಶಿವಪ್ರಸಾದ್ ನಾಯಕ್ ಮರೋಳಿ ಇವರು ವಿದ್ಯಾರ್ಥಿಗಳಿಗೆ ಶು ಹಾರೈಸಿದರು. ಪ್ರತಿಷ್ಠಾನದ ಅಧ್ಯಕ್ಷ ವಿಜಯ ಶೆಣೈ ಕೊಡಂಗೆ, ಕಾರ್ಯದರ್ಶಿ ಮುರಳಿಧರ ಪ್ರಭು ವಗ್ಗ, ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘದ ಅಧ್ಯಕ್ಷ ಶ್ರೀನಿವಾಸ ಶೆಣೈ ಕೂಡಿಬೈಲು, ಹಿರಿಯ ಮಾರ್ಗದರ್ಶಕ ಗೋಪಾಲ್ ಶೆಣೈ ಕೊಡಂಗೆ, ಸಂಜೀವ್ ಸಾಮಂತ್ ಮರೋಳಿ, ಅನಂತ ಪ್ರಭು ಮರೋಳಿ, ಸುಜಾತ ರಮೇಶ್ ಸಾಮಂತ್, ರಂಜಿತಾ ಜಯರಾಮ್ ನಾಯಕ್, ಸುಚಿತ್ರ ರಮೇಶ ನಾಯಕ್, ಮೋಹನ್ ನಾಯಕ್ ಒಡ್ಡೂರು , ಉಪೇಂದ್ರ ನಾಯಕ್, ಸುಧಾಕರ ಪ್ರಭು ಪೆರ್ಮರೋಡಿ, ರಾಮಕೃಷ್ಣ ಪ್ರಭು ಮಾರಿಬೆಟ್ಟು, ರವೀಂದ್ರ ನಾಯಕ್ ಕುಂಟಲ್ಪಾಡಿ, ವಿಶ್ವ ಕೊಂಕಣಿ ಕೇಂದ್ರದ ಕಾರ್ಯನಿರ್ವಹಣಾಧಿಕಾರಿ ಡಾ. ಬಿ. ದೇವದಾಸ್ ಪೈ,ಪುರೋಹಿತರಾದ ಪ್ರಭಾಕರ್ ಭಟ್ ಇಡ್ಯಾ ಮುಂತಾದವರು ಉಪಸಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net