

ಮಂಗಳೂರು: ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಓದುಗರಿಗೆ ಆಯೋಜಿಸಿದ್ದ ‘ವಿಜಯವಾಣಿ ಓದಿ ಕಾರು ಗೆಲ್ಲಿ’ ಸ್ಪರ್ಧೆ ವಿಜೇತರಿಗೆ ಶನಿವಾರ ಮಂಗಳೂರಿನ ವಿಜಯವಾಣಿ ಕಚೇರಿಯಲ್ಲಿ ಬಹುಮಾನ ವಿತರಿಸಲಾಯಿತು.
ಪ್ರಥಮ ಬಹುಮಾನ ಕಾರು - ಕಡಬ ತಾಲೂಕಿನ ಕೊಲದ ಭವಾನಿ ಗೌಡ ಎಸ್., ದ್ವಿತೀಯ ಬಹುಮಾನ ಬೈಕ್ - ಕಡಬ ತಾಲೂಕಿನ ಕೊಲ ಸಬಳೂರಿನ ಪರಮೇಶ್ವರ ಎಸ್., ತೃತೀಯ ಬಹುಮಾನ ಲ್ಯಾಪ್‌ಟಾಪ್ - ಉಡುಪಿ ತಾಲೂಕಿನ ಹೆಬ್ರಿ ಮಡಾಮಕ್ಕಿಯ ಶ್ರೀನಿವಾಸ ಮಂಜ, ಚತುರ್ಥ ಬಹುಮಾನ - ರೆಫ್ರಿಜರೇಟರ್ ಕುಂದಾಪುರ ವೆಂಕಟಲಕ್ಷ್ಮೀ ರೆಸಿಡೆನ್ಸಿಯ ನಾಗಶ್ರೀ ಗೋವಿಂದ ಭಟ್ ಸ್ವೀಕರಿಸಿದರು.
*ಓದುಗರ ಬದುಕಲ್ಲಿ ಸಂಭ್ರಮ
ಮುಖ್ಯ ಅತಿಥಿಯಾಗಿ ಮೆಸ್ಕಾಂನ ಸಾರ್ವಜನಿಕ ಸಂಪರ್ಕ ಅಧಿಕಾರಿ ವಸಂತ ಶೆಟ್ಟಿ ಅವರು ಪಾಲ್ಗೊಂಡು ಅದೃಷ್ಟಶಾಲಿ ವಿಜೇತರಿಗೆ ಬಹುಮಾನ ವಿತರಿಸಿದರು. ಪತ್ರಿಕೆ ಸ್ಪರ್ಧೆಗಳನ್ನು ಆಯೋಜಿಸಿ ಜಾಗೃತ ಓದುಗರ ಬದುಕಿನಲ್ಲಿ ಸಂಭ್ರಮ ಉಂಟು ಮಾಡುವುದು ಶ್ಲಾಘನೀಯ. ಈ ಮೂಲಕ ಪತ್ರಿಕೆಯ ಆದಾಯದ ಒಂದು ಭಾಗವನ್ನು ಓದುಗರಿಗೆ ಬಹುಮಾನದ ರೂಪದಲ್ಲಿ ನೀಡುವ ಪರಿಕಲ್ಪನೆ ಮಾದರಿ. ಪತ್ರಿಕಾ ಕ್ಷೇತ್ರದಲ್ಲಿ ಸತ್ಯ, ನಿಷ್ಠೆ, ನಿರ್ಭೀತಿಯಿಂದ ಮುನ್ನಡೆದಾಗ ಯಶಸ್ಸು ಸಾಧ್ಯವಾಗುತ್ತದೆ. ಪತ್ರಿಕೆಯ ಮಾಲೀಕರಾದ ವಿಜಯ ಸಂಕೇಶ್ವರ ಅವರ ದೂರದೃಷ್ಟಿಯ, ಪರಿಶ್ರಮದ ಉದ್ಯಮದಿಂದಾಗಿ ಸಾವಿರಾರು ಮಂದಿಗೆ ಉದ್ಯೋಗ ನೀಡಿ, ಲಕ್ಷಾಂತರ ಮಂದಿಯ ಬದುಕಿಗೆ ಆಸರೆಯಾಗಿದ್ದಾರೆ. ಅವರ ಸಾಧನೆ, ವ್ಯಕ್ತಿತ್ವ ಸಮಾಜಕ್ಕೆ ಮಾದರಿ ಎಂದರು.
ಹಾಂಗ್ಯೋ ಐಸ್‌ಕ್ರೀಂ ಪ್ರೈ.ಲಿ.ನ ಬ್ಯುಸಿನೆಸ್ ಡೆವಲಪ್‌ಮೆಂಟ್ ಮ್ಯಾನೇಜರ್ ರಾಕೇಶ್ ಕಾಮತ್ ಮಾತನಾಡಿ, ಪತ್ರಿಕೆ ಓದುಗರನ್ನು ಆಕರ್ಷಿಸಲು ಇಂತಹ ಸ್ಪರ್ಧೆಗಳನ್ನು ಆಯೋಜಿಸುತ್ತಿರುವುದು ಉತ್ತಮ ಪರಿಕಲ್ಪನೆ. ಪತ್ರಿಕಾ ರಂಗದಲ್ಲಿ ಓದುಗರಿಗಾಗಿ ದೊಡ್ಡ ಮಟ್ಟದ ಸ್ಪರ್ಧೆ ಮೊದಲ ಬಾರಿಗೆ ನಡೆದಿದೆ. ಪತ್ರಿಕೆ ಮತ್ತು ಓದುಗರ ನಡುವೆ ಬಾಂಧವ್ಯವನ್ನು ವೃದ್ಧಿಸಲು ಪೂರಕವಾಗಿದೆ ಎಂದರು.
ವಿ.ಆರ್.ಎಲ್. ಮೀಡಿಯಾ ಪ್ರೈ.ಲಿ. ಉಪಾಧ್ಯಕ್ಷ ಅರುಣ್ ಕೆ.ಆರ್., ವಿಜಯವಾಣಿ ಮಂಗಳೂರು ಆವೃತ್ತಿಯ ಸ್ಥಾನೀಯ ಸಂಪಾದಕ ಸುರೇಂದ್ರ ಎಸ್. ವಾಗ್ಳೆ, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನವೀನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.