

ಮಂಗಳೂರು: ಹೊರವಲಯದ ವಾಮಂಜೂರಿನಲ್ಲಿ ಸೆಕೆಂಡ್ ಸೇಲ್ ಅಂಗಡಿಯೊಂದರಲ್ಲಿ ರೌಡಿಶೀಟರ್‌ನೊಬ್ಬನಿಂದ ಆಕಸ್ಮಿಕವಾಗಿ ಗುಂಡು ೈರಿಂಗ್‌ನಿಂದಾಗಿ ಧರ್ಮಗುರು ಗಾಯಗೊಂಡ ಘಟನೆ ಸೋಮವಾರ ಸಂಜೆ ವೇಳೆ ನಡೆದಿದೆ.
ರೌಡಿಶೀಟರ್ ಬದ್ರುದ್ದೀನ್ ಯಾನೆ ಅದ್ದು (35) ಪ್ರಕರಣದ ಆರೋಪಿ. ಎದುರುಪದವು ಮಸೀದಿಯ ಧರ್ಮಗುರು ಸ್ವಾನ್ (25) ಗಾಯಗೊಂಡವರು.
ಪ್ರಕರಣದ ವಿವರ: ರೌಡಿಶೀಟರ್ ಬದ್ರುದ್ದೀನ್ ಎಂಬಾತನ ವಾಮಂಜೂರಿನಲ್ಲಿ ಸೆಕೆಂಡ್ ಸೇಲ್ ಮಳಿಗೆಯನ್ನಿಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದ. ಧರ್ಮಗುರು ಸ್ವಾನ್ ಅವರಿಗೆ 10 ಸಾವಿರ ರೂ.ನಗದು ಅವಶ್ಯಕತೆಯಿದ್ದು, ಅದ್ದುವಿಗೆ ಮೊತ್ತ ಗೂಗಲ್ ಪೇ ಮಾಡಿ ನಗದು ಪಡೆಯಲು ಮಳಿಗೆಗೆ ಹೋಗಿದ್ದರು. ಈ ವೇಳೆ ಅಂಗಡಿಯಲ್ಲಿ ಕುಳಿತ್ತಿದ್ದ ಅದ್ದು ತಾನು ಹೊಂದಿದ್ದ ಅಕ್ರಮ ಗನ್‌ನ್ನು ಹಿಡಿದುಕೊಂಡು ಮಾತನಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಗುಂಡು ೈರಿಂಗ್ ಆಗಿ ಸ್ವಾನ್ ಅವರ ಹೊಟ್ಟೆಗೆ ಗಾಯವಾಗಿದೆ. ಕೂಡಲೇ ಸ್ವಾನ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ತಲೆಮರೆಸಿಕೊಂಡ ಆರೋಪಿ: ಆರೋಪಿ ಬದ್ರುದ್ದೀನ್ ಯಾನೆ ಅದ್ದು ರೌಡಿಶೀಟರ್ ಆಗಿದ್ದು, ಅಕ್ರಮವಾಗಿ ಗನ್ ಹೊಂದಿದ್ದ. ಘಟನೆ ನಡೆದ ಕೂಡಲೇ ಆರೋಪಿ ಅಪಾಯವನ್ನು ಅರಿತು ತಲೆಮರೆಸಿಕೊಂಡಿದ್ದಾನೆ. ಬದ್ರುದ್ದೀನ್ ಮೇಲೆ ಚರಣ್‌ರಾಜ್ ಕೊಲೆ ಸೇರಿದಂತೆ ಇತರ ಪ್ರಕರಣಗಳಿವೆ.
ಪೊಲೀಸರಿಂದ ತಪಾಸಣೆ: ಘಟನೆ ನಡೆದ ಸ್ಥಳಕ್ಕೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ದೌಡಾಯಿಸಿ ತಪಾಸಣೆ ನಡೆಸಿದ್ದಾರೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.