

ಮಂಗಳೂರು: ಶಾಲೆಯ ಆತ್ಮವೇ ಮಕ್ಕಳಾಗಿದ್ದಾರೆ. ಮಕ್ಕಳು ಉತ್ತಮ ಮೌಲ್ಯಗಳನ್ನು ರೂಡಿಸಿಕೊಳ್ಳುವ ಮೂಲಕ ದೇಶಕ್ಕೆ ಉತ್ತಮ ನಾಗರಿಕರಾಗಿ ಹೊರಬರಬೇಕು ಎಂದು ಉರ್ವ ಚರ್ಚಿನ ಪ್ರಧಾನ ಧರ್ಮಗುರು ಹಾಗೂ ಸಂತ ಅಲೋಶಿಯಸ್ ಶಾಲೆಗಳ ಸಂಚಾಲಕ ಾ. ಬೆಂಜಮಿನ್ ಪಿಂಟೊ ಹೇಳಿದರು.
ಅವರು ಗುರುವಾರ ನಗರದ ಉರ್ವ ಸಂತ ಅಲೋಶಿಯಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳು ಎಂದರೆ ಎಲ್ಲರಿಗೂ ಸಂತೋಷ. ಮಕ್ಕಳು ದೇವರ ಪ್ರತಿರೂಪವೇ ಆಗಿರುವುದರಿಂದ ಅವರ ಕುರಿತು ಹೆತ್ತವರು, ಶಿಕ್ಷಕರು ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ ಎಂದರು.
ಈ ಸಂದರ್ಭ ಉರ್ವ ಸಂತ ಅಲೋಶಿಯಸ್ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ್ಲಾವಿಯಾ ಡಿಸೋಜ, ಪಿಟಿಐ ಉಪಾಧ್ಯಕ್ಷ ಈಶ್ವರ್, ವಿದ್ಯಾರ್ಥಿ ನಾಯಕ ವಿನಾಯಕ್, ಉಪನಾಯಕ ಪೂರ್ವಿಕ್ ಉಪಸ್ಥಿತರಿದ್ದರು. ಶಿಕ್ಷಕಿ ಶಶಿಪ್ರಭಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ದಿವ್ಯಾ ವಂದಿಸಿದರು.