ಉರ್ವ ಕೊರಗಜ್ಜ ಕ್ಷೇತ್ರ ನೂತನ ಕಚೇರಿ ಉದ್ಘಾಟನೆ

mng 6 sep urva Koragajja
Published on



ಮಂಗಳೂರು: ಉರ್ವ ಬಳಿಯ ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣಗೊಂಡ ಆಡಳಿತ ಕಚೇರಿಯನ್ನು ಬುಧವಾರ ಉದ್ಘಾಟಿಸಲಾಯಿತು.
ಬರ್ಕೆ ಫ್ರೆಂಡ್ಸ್ ಇದರ ಸ್ಥಾಪಕ ಅಧ್ಯಕ್ಷ ಯಜ್ಞೇಶ್ವರ ಬರ್ಕೆ ಅವರು ನೂತನ ಕಚೇರಿ ಉದ್ಘಾಟಿಸಿ, ಶುಭ ಹಾರೈಸಿದರು.


ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಲಕ್ಷ್ಮಣ ಅಮೀನ್ ಕೋಡಿಕಲ್ ಅವರು ಮಾತನಾಡಿ, ಕೊರಗಜ್ಜನ ಕಾರಣಿಕದಿಂದಾಗಿ ಬೆಳಗುತ್ತಿರುವ ಶ್ರೀ ಕ್ಷೇತ್ರದಲ್ಲಿ ಸುಸಜ್ಜಿತ ಕಚೇರಿ ನಿರ್ಮಿಸಿದ ಆಡಳಿತ ಮಂಡಳಿಯ ಕಾರ್ಯ ಅಭಿನಂದನೀಯ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಪಡುಪಣಂಬೂರು ಸುವರ್ಣ ಮೂಲಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಸುಚೀಂದ್ರ ವಿ. ಅಮೀನ್ ಅವರು ನೂತನವಾಗಿ ನಿರ್ಮಾಣಗೊಂಡ ಧ್ವಜಸ್ತಂಭದಲ್ಲಿ ತುಳುನಾಡಿನ ಧ್ವಜಾರೋಹಣ ನೆರವೇರಿಸಿದರು.


ಅತಿಥಿಗಳಾಗಿ ಮಾರ್ಣಬೈಲು ಶ್ರೀ ಕ್ಷೇತ್ರ ಧರ್ಮ ಚಾವಡಿಯ ಧರ್ಮದರ್ಶಿ ಉದಯ ಪೂಜಾರಿ, ಉರ್ವ ಕೋಟೆದ ಬಬ್ಬುಸ್ವಾಮಿ ದೈವಸ್ಥಾನದ ಗುರಿಕಾರ ಬಾಲಕೃಷ್ಣ ಉರ್ವ, ಸುಂದರ ನಲಿಕೆ ಮತ್ತಿತರರು ಉಪಸ್ಥಿತರಿದ್ದರು.


ಶ್ರೀ ಕೊರಗಜ್ಜ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ರಾಜೇಶ್ ಉರ್ವ ಸ್ವಾಗತಿಸಿದರು. ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net