ಪಾಪದ ಪ್ರಾಯಶ್ಚಿತದಿಂದ ಉತ್ತಮ ನಡತೆ ರೂಡಿಸಿಕೊಳ್ಳಿ - ಉರ್ವ ಚರ್ಚ್‌ನ ವಾರ್ಷಿಕ ಹಬ್ಬದ ಸಂಭ್ರಮದ ಕೃತಜ್ಞತಾ ಪೂಜೆಯಲ್ಲಿ ಬಿಷಪ್ ಪ್ರವಚನ

mng--8 Dec Urva church
Published on

ಮಂಗಳೂರು: ಮೇರಿ ಮಾತೆ ಪ್ರೀತಿಯಿಂದ ಬರಮಾಡಿಕೊಳ್ಳುವ ಜತೆಗೆ ತನ್ನ ದಯೆಯನ್ನು ಎಲ್ಲರಿಗೂ ನೀಡುತ್ತಾ ಪೋಷಿಸುತ್ತಾರೆ. ಇದಕ್ಕಾಗಿ ನಾವು ಪಾಪದ ಪ್ರಾಯಶ್ಚಿತ ಮಾಡುವ ಮೂಲಕ ಉತ್ತಮ ನಡತೆಯನ್ನು ರೂಡಿಸಿಕೊಳ್ಳುವ ಅಗತ್ಯವಿದೆ ಎಂದು ಮಂಗಳೂರು ಬಿಪಷ್ ಡಾ.ಪೀಟರ್ ಪಾವ್ಲ್ ಸಲ್ಡಾನ ಹೇಳಿದರು.

ನಗರದ ಲೇಡಿಹಿಲ್‌ನ ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬದ ಸಂಭ್ರಮದ ಕೃತಜ್ಞತಾ ಪೂಜೆಯಲ್ಲಿ ಭಾನುವಾರ ಪ್ರವಚನ ನೀಡಿದರು. ದೇವರು ಎಂದಿಗೂ ಬಲಪ್ರಯೋಗಕ್ಕೆ ಇಳಿಯುವುದಿಲ್ಲ. ಭಕ್ತರು ದೇವರಲ್ಲಿ ಪ್ರಾರ್ಥನೆ ಮೂಲಕ ವಿನಂತಿಸಿಕೊಂಡಾಗ ಮಾತ್ರ ಅವರು ತಮ್ಮ ದಯೆಯನ್ನು ತೋರಿಸುತ್ತಾರೆ. ಮನುಷ್ಯರು ಸದಾ ಕಾಲ ಪಾಪದ ಕಡೆಗೆ ವಾಲುತ್ತಾರೆ ಆದರೆ ದೇವರ ಆಧಾರ ಇದ್ದಾಗ ಮಾತ್ರ ಈ ಪಾಪದ ಕೂಪದಿಂದ ಹೊರಬಂದು ಉತ್ತಮ ಸನ್ನಡತೆಯನ್ನು ರೂಡಿಸಿಕೊಳ್ಳಲು ಸಾಧ್ಯವಿದೆ ಎಂದರು.

ವಿಶೇಷ ಅರಾಧನಾ ವಿಧಿಯನ್ನು ಮಂಗಳ ಜ್ಯೋತಿ ಸಂಸ್ಥೆಯ ನಿರ್ದೇಶಕ ಾ. ವಿಜಯ್ ಮಚಾದೋ ನಡೆಸಿ ಕೊಟ್ಟರು. ಈ ಸಂದರ್ಭ ಉರ್ವ ಚರ್ಚ್‌ನ ಪ್ರಧಾನ ಧರ್ಮಗುರು ಾ. ಬೆಂಜಮಿನ್ ಪಿಂಟೋ, ಅಶೋಕನಗರ ಸಂತ ಡಾಮಿನಿಕ್ ಚರ್ಚ್‌ನ ಪ್ರಧಾನ ಧರ್ಮಗುರು ಾ.ಡೇನಿಯಲ್ ಸಂಪತ್ ವೇಗಸ್, ಉರ್ವ ಚರ್ಚ್‌ನ ಾ. ಹೆನ್ರಿ ಸಿಕ್ವೇರಾ, ಸಹಾಯಕ ಧರ್ಮ ಗುರು ಾ. ಲ್ಯಾನ್ಸನ್ ಪಿಂಟೋ ಸೇರಿದಂತೆ ಸುತ್ತಮುತ್ತಲಿರುವ ಚರ್ಚ್‌ಗಳ ಸುಮಾರು 60ಕ್ಕೂ ಅಧಿಕ ಧರ್ಮಗುರುಗಳು ಕೃತಜ್ಞತಾ ಪೂಜೆಯಲ್ಲಿ ಭಾಗವಹಿಸಿದ್ದರು.

ಪೂಜೆಯ ಬಳಿಕ ಪರಮ ಪ್ರಸಾದದ ಮೆರವಣಿಗೆ ಉರ್ವ ಚರ್ಚಿನ ಮೂಲಕ ಉರ್ವ ಮಾರ್ಕೆಟ್, ಗಾಂಧಿನಗರ, ಮಣ್ಣಗುಡ್ಡೆ, ಲೇಡಿಹಿಲ್ ಸರ್ಕಲ್ ಮೂಲಕ ಉರ್ವ ಚರ್ಚ್‌ಗೆ ಮತ್ತೆ ಬರಲಾಯಿತು. ಈ ಬಳಿಕ ಸಾವಿರಾರು ಮಂದಿ ಭಕ್ತರು ಪರಮ ಪ್ರಸಾದದ ಆಶೀರ್ವಾದವನ್ನು ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net