ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಆನ್‌ಲೈನ್ ಪಾವತಿ ವ್ಯವಸ್ಥೆಗೆ ಚಾಲನೆ

IMG-20211013-WA0024
Published on

ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಆನ್‌ಲೈನ್ ಪಾವತಿ ವ್ಯವಸ್ಥೆಗೆ ಬುಧವಾರ ಪ್ರಾಧಿಕಾರ ಅಧ್ಯಕ್ಷ ರವಿಶಂಕರ್ ಮಿಜಾರ್ ಚಾಲನೆ ನೀಡಿದರು.
ಏಕನಿವೇಶನ ಸೇರಿದಂತೆ ವಿವಿಧ ವಿನ್ಯಾಸ ಅನುಮೋದನೆಗೆ ಸಂಬಂಧಿಸಿದ ಹಾಗೂ ಇನ್ನಿತರ ಶುಲ್ಕಗಳನ್ನು ಇಲ್ಲಿವರೆಗೆ ನಗದು, ಡಿಮಾಂಡ್ ಡ್ರಾಫ್ಟ್, ಬ್ಯಾಂಕ್ ಚಲನ್ ಮೂಲಕ ಪಾವತಿಸಿಕೊಳ್ಳಲಾಗುತ್ತಿತ್ತು. ಇನ್ನುಮುಂದೆ ಡಿಜಿಟಲ್ ವ್ಯವಸ್ಥೆಗೆ ಒಳಪಡುವ ನಿಟ್ಟಿನಲ್ಲಿ ಆನ್‌ಲೈನ್ ಪಾವತಿ ಅಳವಡಿಸಿಕೊಳ್ಳಲು ನಿರ್ಧರಿಸಿದಂತೆ ಯೋಜನೆ ಜಾರಿಗೆ ತರಲಾಗಿದೆ. ಹಿಂದಿನ ವ್ಯವಸ್ಥೆಗಳ ಜತೆ ಹೆಚ್ಚುವರಿಯಾಗಿ ಆನ್‌ಲೈನ್ ವ್ಯವಸ್ಥೆಯನ್ನೂ ಸಾರ್ವಜನಿಕರು ಉಪಯೋಗಿಸಬಹುದು. ಕಿಯೋನಿಕ್ಸ್ ಸಹಯೋಗದಲ್ಲಿ ಸ್ಥಳೀಯ ಸೇವಾದಾರರಾದ ಐ-ಸರ್ಚ್ ಸಂಸ್ಥೆ ಈ ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸಿದ್ದು, ಬ್ಯಾಂಕ್ ಆಫ್ ಬರೋಡಾ ಮೂಲಕ ಆನ್‌ಲೈನ್ ಪಾವತಿಯಾಗಲಿದೆ.
ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್‌ಬ್ಯಾಂಕಿಂಗ್, ಜತೆಗೆ ಆರ್‌ಬಿಐ ಅನುಮೋದಿಸಿರುವ ಯುಪಿಐನ ಫೋನ್‌ಪೇ, ಗೂಗಲ್ ಪೇ, ಭಿಮ್ ಆ್ಯಪ್‌ಗಳ ಮೂಲಕ ಮೊತ್ತ ಪಾವತಿಬಹುದು. ಸಾರ್ವಜನಿಕರು ಅನಗತ್ಯವಾಗಿ ಕಚೇರಿಗೆ ಬಂದು ಸಮಯ ವ್ಯರ್ಥ ತಪ್ಪುತ್ತದೆ. ಮೊತ್ತ ಪಾವತಿಸಿ ತಕ್ಷಣ ಈ ಕುರಿತ ಮೆಸೇಜ್ ಗ್ರಾಹಕರ ಮೊಬೈಲಿಗೆ ಬರಲಿದ್ದು, ತಮ್ಮ ಫೈಲ್‌ನ ಕುರಿತು ಮಾಹಿತಿ ಪಡೆದುಕೊಳ್ಳಬಹುದು. ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಹಣಪಾವತಿಗೆ ಸಂಬಧಿಸಿದ ಲಿಂಕ್ ದೊರೆಯಲಿದೆ ಎಂದವರು ತಿಳಿಸಿದರು.
ನಗರ ಯೋಜಕ ರಘು ಜಿ.ಆರ್., ಸಹಾಯಕ ನಗರ ಯೋಜಕ ಕಿರಣ್ ಕುಮಾರ್, ಕಿಯೋನಿಕ್ಸ್ ಅಧಿಕಾರಿ ಬಾಲಕೃಷ್ಣ ಶೆಟ್ಟಿ, ಬ್ಯಾಂಕ್ ಆಫ್ ಬರೋಡ ಮುಖ್ಯ ಪ್ರಬಂಧಕ ಗಣೇಶ್ ಎಲ್.ಎಸ್.ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net