

ಮಂಗಳೂರು: ಮಂಗಳೂರು ವಿವಿ ಇತಿಹಾಸ ವಿಭಾಗದ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥ ಪ್ರೊ.ಪ್ರೊ.ಉದಯ ಬಾರ್ಕೂರು ಹೃದಯಾಘಾತದಿಂದ ಶುಕ್ರವಾರ ಸಂಜೆ ನಿಧನರಾದರು. ಇವರು ಉಡುಪಿ ಜಿಲ್ಲೆಯ ಬಾರ್ಕೂರು ನಿವಾಸಿಯಾಗಿರುವ ಇವರು 33 ವರ್ಷ ಬೋಧನಾ ಸೇವೆ ಸಲ್ಲಿಸಿದ್ದಾರೆ. ಮಧ್ಯಕಾಲೀನ ಭಾರತೀಯ ಇತಿಹಾಸ, ಮಧ್ಯಕಾಲೀನ ಕರ್ನಾಟಕ ಮತ್ತು ಕರಾವಳಿಯ ಸಾಮಾಜಿಕ ಇತಿಹಾಸದ, ಎಪಿಗ್ರಫಿ ಸೇರಿದಂತೆ ಸಮಗ್ರ ಜ್ಞಾನ ಹೊಂದಿದ್ದ ಇವರು ಆಕ್ಸ್‌ಫರ್ಡ್ ವಿವಿಯಿಂದ ಪೊಸ್ಟರಲ್ ಡಾಕ್ಟ್ರೇಟ್ ಪದವಿ ಪಡೆದಿದ್ದರು. ಹಲವು ಸಂಶೋಧನಾರ್ಥಿಗಳಿಗೆ ಸಂಶೋಧನಾ ಮಾರ್ಗದರ್ಶಕರಾಗಿ, 50ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳನ್ನು ಪ್ರಸ್ತುತಪಡಿಸಿದ್ದರು.