ಮಾನಸಿಕ ಸಿದ್ಧತೆಯೇ ಆಟದ ಯಶಸ್ಸಿಗೆ ಕಾರಣ: ಆಶ್ವಿನ್​ ಪಡುಕೋಣೆ

udp-30-mgm
Published on

ಉಡುಪಿ: ಟೇಬಲ್​ ಟೆನ್ನಿಸ್​ ಆಟಕ್ಕೆ ಆತ್ಮವಿಶ್ವಾಸ ಬೇಕು. ಪೂರ್ವಸಿದ್ಧತೆಯಿಲ್ಲದೆ ಈ ಆಟ ಆಡುವುದು ಕಷ್ಟ. ಟೇಬಲ್​ ಟೆನ್ನಿಸ್​ ತರಬೇತಿ ಪಡೆಯುವ ವಾತಾವರಣವೂ ಮುಖ್ಯವಾಗಿದ್ದು, ಮಾನಸಿಕ ಸಿದ್ಧತೆಯೇ ಆಟದ ಯಶಸ್ಸಿಗೆ ಕಾರಣವಾಗುತ್ತದೆ ಎಂದು ರಾಷ್ಟ್ರೀಯ ಟೇಬಲ್​ ಟೆನ್ನಿಸ್​ ಆಟಗಾರ ಆಶ್ವಿನ್​ ಕುಮಾರ್​ ಪಡುಕೋಣೆ ತಿಳಿಸಿದರು.

ಸೋಮವಾರ ಎಂಜಿಎಂ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್​ ಕಾಲೇಜು ಟೇಬಲ್​ ಟೆನ್ನಿಸ್​ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಉಡುಪಿ ಕೆನರಾ ಬ್ಯಾಂಕಿನ ಡಿಜಿಎಂ ಶೀಬಾ ಸಹಾಜನ್​ ಮುಖ್ಯ ಅತಿಥಿಯಾಗಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದರು. ಯುವಜನ ಸಬಲೀಕರಣ ಮತ್ತು ಕ್ರೀಡೆ ಇಲಾಖೆ ಸಹನಿರ್ದೇಶಕ ರೋಶನ್​ ಕುಮಾರ್​ ಶೆಟ್ಟಿ, ವಿವಿ ಪರಿವೀಕ್ಷಕ ಗಣೇಶ್​ ಕೋಟ್ಯಾನ್​, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಮೇಶ್​ ಕಾರ್ಲ, ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಎ.ಮಾಲತಿದೇವಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ನಿರ್ದೇಶಕಿ ಜಯಶ್ರೀ ನಾಯಕ್​ ಸ್ವಾಗತಿಸಿ, ಉಪನ್ಯಾಸಕಿ ಅಂಕಿತಾ ರಾವ್​ ವಂದಿಸಿದರು. ಉಪನ್ಯಾಸಕ ಸುಚಿತ್​ ಕೋಟ್ಯಾನ್​ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net