ಮಂಗಳೂರು ವಿವಿ- ಕಣಚೂರು ಶೈಕ್ಷಣಿಕ ಒಪ್ಪಂದ

New Project (49)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಮಂಗಳೂರು ವಿಶ್ವವಿದ್ಯಾಲಯ ಮತ್ತು ಕಣಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆಯ ನಡುವೆ ಶೈಕ್ಷಣಿಕ ಹಾಗೂ ಸಂಶೋಧನೆ ವಿಷಯಕ್ಕೆ ಪೂರಕವಾಗಿ ಒಡಂಬಡಿಕೆಯು ಮಂಗಳೂರು ವಿ.ವಿ. ಸಿಂಡಿಕೇಟ್ ಸಭಾಂಗಣದಲ್ಲಿ ನಡೆಯಿತು.

ಮಂಗಳೂರು ವಿ.ವಿ. ಕುಲಪತಿ ಪ್ರೊ.ಪಿ.ಎಲ್.ಧರ್ಮ ಮಾತನಾಡಿ, ಕಣಚೂರು ವೈದ್ಯಕೀಯ ಈ ಒಡಂಬಡಿಕೆ ಒಂದು ಮಹತ್ವದ ಹೆಜ್ಜೆಯಾಗಿದೆ. ಆರೋಗ್ಯ, ಶೈಕ್ಷಣಿಕ ಕ್ಷೇತ್ರದ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳುವಲ್ಲಿ ಹಾಗೂ ಸಾಮಾಜಿಕ ಸಂಬಂಧಗಳನ್ನು ವಿಸ್ತರಿಸುವಲ್ಲಿ ಸಹಕಾರಿಯಾಗಲಿದೆ ಎಂದರು.

ಕಣಚೂರು ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಅಬ್ದುಲ್ ರಹಿವಾನ್ ಮಾತನಾಡಿ, ಮಂಗಳೂರು ವಿ.ವಿ. ಮತ್ತು ಕಣಚೂರು ಸಂಸ್ಥೆಯು ಸಮೀಪದಲ್ಲೇ ಇದ್ದು, ಇದೀಗ ಒಡಂಬಡಿಕೆ ಮೂಲಕ ಶೈಕ್ಷಣಿಕವಾಗಿ ಮತ್ತಷ್ಟು ಹತ್ತಿರವಾಗಿದ್ದೇವೆ. ಒಡಂಬಡಿಕೆಯಿಂದ ಇಡೀ ಸಮಾಜ, ಜಗತ್ತಿಗೆ ಶೈಕ್ಷಣಿಕವಾಗಿ ಪ್ರಯೋಜನ ಸಿಗುವಂತಾಗಲಿ ಎಂದರು.

ಮಂಗಳೂರು ವಿ.ವಿ. ಕುಲಸಚಿವ ರಾಜು ಮೊಗವೀರ, ಕಣಚೂರು ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ಡಾ.ರೋಹನ್ ಮೋನಿಸ್, ಕಣಚೂರು ಮೆಡಿಕಲ್ ಕಾಲೇಜಿನ ಡೀನ್ ಡಾ.ಶಹನಾಝ್ ಮನ್ನಿಪ್ಪಾಡಿ, ವಿ.ವಿ. ಪರೀಕ್ಷಾಂಗ ಕುಲಸಚಿವ ಪ್ರೊ.ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಪ್ರೊ.ವೈ.ಸಂಗಪ್ಪ, ಐಕ್ಯುಎಸಿ ಸಂಯೋಜಕಿ ಡಾ.ಮೋನಿಕಾ ಸದಾನಂದ, ಕಲಾ ನಿಕಾಯದ ಡೀನ್ ಡಾ.ಪರಿಣಿತ, ಕಾಲೇಜು ಅಭಿವೃದ್ಧಿ ಸಮಿತಿಯ ನಿರ್ದೇಶಕ ಡಾ.ಗಣೇಶ್ ಸಂಜೀವ, ಪ್ರಾಧ್ಯಾಪಕ ಡಾ.ನರಂಸಿಂಹಯ್ಯ, ಪ್ರಾಧ್ಯಾಪಕ ಡಾ.ಮಂಜಯ್ಯ, ವೀಣಾ ಮೊದಲಾದವರಿದ್ದರು. ಪ್ರಾಧ್ಯಾಪಕ ಪ್ರೊ.ಜಯರಾಜ್ ಅಮೀನ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net