

ಮೂಡುಬಿದಿರೆ: ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ಕುಸ್ತಿ ಸ್ಪರ್ಧೆ ಪುರುಷ ಹಾಗೂ ಮಹಿಳೆಯರ ಎರಡು ವಿಭಾಗದಲ್ಲಿ 11 ಚಿನ್ನ, 7 ಬೆಳ್ಳಿ ಹಾಗೂ 2 ಕಂಚಿನ ಪದಕದೊಂದಿಗೆ ಮೂಡುಬಿದಿರೆ ಆಳ್ವಾಸ್ ಕುಸ್ತಿಪಟುಗಳು ಸಮಗ್ರ ಪ್ರಶಸ್ತಿ ಪಡೆದರು.
ಫಲಿತಾಂಶ: ಪುರುಷರ ವಿಭಾಗದಲ್ಲಿ: ದೇವರಾಜು- 61 ಕೆಜಿ ವಿಭಾಗದಲ್ಲಿ(ದ್ವಿತೀಯ), ನಿಖಿಲ್- 65 ಕೆಜಿ ವಿಭಾಗದಲ್ಲಿ(ಪ್ರಥಮ), ರಾಕೇಶ್- 70 ಕೆಜಿ ವಿಭಾಗದಲ್ಲಿ(ಪ್ರಥಮ), ಗುಡ್ಡಪ್ಪ- 74 ಕೆಜಿ ವಿಭಾಗದಲ್ಲಿ(ಪ್ರಥಮ), ಶಿವರಾಜು- 79 ಕೆಜಿ ವಿಭಾಗದಲ್ಲಿ(ಪ್ರಥಮ), ಕೃಷ್ಣ- 86 ಕೆಜಿ ವಿಭಾಗದಲ್ಲಿ(ದ್ವಿತೀಯ), ರೇವಣ್ ಕುಮಾರ್- 86 ಕೆಜಿ ವಿಭಾಗದಲ್ಲಿ(ತೃತೀಯ), ಪ್ರಜ್ವಲ್- 92 ಕೆಜಿ ವಿಭಾಗದಲ್ಲಿ(ಪ್ರಥಮ), ಕಾರ್ತಿಕ್- 97 ಕೆಜಿ ವಿಭಾಗದಲ್ಲಿ(ಪ್ರಥಮ), ರಕ್ಷಿತ್ ರಾವ್- 97+ ಕೆಜಿ ವಿಭಾಗದಲ್ಲಿ(ಪ್ರಥಮ) ಸ್ಥಾನ ಪಡೆದರು.
ಮಹಿಳೆಯರ ವಿಭಾಗದಲ್ಲಿ: ತ್ರಿವೇಣಿ-50 ಕೆಜಿ ವಿಭಾಗದಲ್ಲಿ(ದ್ವಿತೀಯ), ಚಂದ್ರಿಕಾ-53 ಕೆಜಿ ವಿಭಾಗದಲ್ಲಿ(ಪ್ರಥಮ), ಶಾಮಲಾ-55 ಕೆಜಿ ವಿಭಾಗದಲ್ಲಿ(ಪ್ರಥಮ), ಗ್ರೀಷ್ಮಾ-57 ಕೆಜಿ ವಿಭಾಗದಲ್ಲಿ(ಪ್ರಥಮ), ಚೈತ್ರಾ- 59 ಕೆಜಿ ವಿಭಾಗದಲ್ಲಿ(ಪ್ರಥಮ), ಮನ್ವಿತಾ- 62 ಕೆಜಿ ವಿಭಾಗದಲ್ಲಿ(ದ್ವಿತೀಯ), ಮೃದುಲಾ-65 ಕೆಜಿ ವಿಭಾಗದಲ್ಲಿ(ದ್ವಿತೀಯ), ಮಾನ್ಯ- 68 ಕೆಜಿ ವಿಭಾಗದಲ್ಲಿ(ದ್ವಿತೀಯ), ಪ್ರಣ್ವಿಕಾ- 72 ಕೆಜಿ ವಿಭಾಗದಲ್ಲಿ(ದ್ವಿತೀಯ), ಮಲ್ಲಮ್ಮ- 76 ಕೆಜಿ ವಿಭಾಗದಲ್ಲಿ(ತೃತೀಯ) ಸ್ಥಾನ ಗಳಿಸಿದರು. ಕ್ರೀಡಾಪಟುಗಳನ್ನು ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ.