ಕೆಸರಿನಲ್ಲಿ ಕ್ರೀಡೋತ್ಸವ: ಮಂಗಳೂರು ವಿವಿ ಚಾಂಪಿಯನ್

kesaru
Published on

ಉಳ್ಳಾಲ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ ಉಳ್ಳಾಲ ತಾಲೂಕು ವಾಲಿಬಾಲ್ ಅಸೋಸಿಯೇಷನ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಳ್ಳಾಲ್ ಸ್ಥಳೀಯ ಸಂಸ್ಥೆಗಳ ಆಶ್ರಯದಲ್ಲಿ ಭಾನುವಾರ ಕೊಣಾಜೆ ಗ್ರಾಮದ ಪರಂಡೆ ಕೆಸರಿನಲ್ಲಿ ಕ್ರೀಡೋತ್ಸವ ಸಮಾಪನಗೊಂಡಿತು.

ಪತ್ರಕರ್ತರು, ಮಂಗಳೂರು ವಿಶ್ವವಿದ್ಯಾಲಯ, ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ವಾಲಿಬಾಲ್, ಹಗ್ಗಜಗ್ಗಾಟ, ರಿಲೇ, ಓಟದ ಸ್ಪರ್ಧೆಗಳು ನಡೆದವು. ವಾಲಿಬಾಲ್ನಲ್ಲಿ ಪತ್ರಕರ್ತರ ತಂಡ ಪ್ರಥಮ, ಮಂಗಳೂರು ವಿಶ್ವವಿದ್ಯಾಲಯ ತಂಡ ದ್ವಿತೀಯ, ಹಗ್ಗಜಗ್ಗಾಟದಲ್ಲಿ ಮಂಗಳೂರು ವಿಶ್ವವಿದ್ಯಾಲಯ ತಂಡ ಪ್ರಥಮ, ಪತ್ರಕರ್ತರ ತಂಡ ದ್ವಿತೀಯ ಬಹುಮಾನ ಪಡೆಯಿತು.

ಹ್ಯಾಂಡ್‌ಬಾಲ್ ಬಾಲಕರ ವಿಭಾಗದಲ್ಲಿ ಹರೇಕಳ ರಾಮಕೃಷ್ಣ ಪ್ರೌಢಶಾಲೆ ಪ್ರಥಮ, ಕೊಣಾಜೆಪದವು ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ರಾಮಕೃಷ್ಣ ಪ್ರಥಮ, ನಿತ್ಯಾಧರ್ ಶಾಲೆ ದ್ವಿತೀಯ ಬಹುಮಾನ ಪಡೆಯಿತು. ರಿಲೇ ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ನಿತ್ಯಾಧರ ಪ್ರಥಮ, ಗಾಡಿಗದ್ದೆ ಶಾಲೆ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಗಾಡಿಗದ್ದೆ ಪ್ರಥಮ, ನಿತ್ಯಾಧರ ದ್ವಿತೀಯ ಬಹುಮಾನ ಪಡೆಯಿತು.

ಪ್ರೌಢಶಾಲಾ ಬಾಲಕಿಯರ ವಿಭಾಗ ರಾಮಕೃಷ್ಣ ಪ್ರಥಮ, ನಿತ್ಯಾಧರ ದ್ವಿತೀಯ, ಬಾಲಕರ ವಿಭಾಗ ಕೊಣಾಜೆಪದವು ಪ್ರಥಮ ಹಾಗೂ ರಾಮಕೃಷ್ಣ ದ್ವಿತೀಯ ಸ್ಥಾನ ಪಡೆಯಿತು.

ಸಮಾರೋಪ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅನ್ಸಾರ್ ಇನೋಳಿ ಅಧ್ಯಕ್ಷತೆ ವಹಿಸಿದ್ದರು. ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಅಬ್ದುಲ್ ಮಜೀದ್ ಮಲಾರ್, ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್ ಲಮಾಣಿ, ಸಹಶಿಕ್ಷಕ ಶಿವಕುಮಾರ್, ಸ್ಕೌಟ್ಸ್ ಶಿಕ್ಷಕಿ ಗೀತಾ ಜುಡಿತ್ ಸಲ್ದಾನ ಉಪಸ್ಥಿತರಿದ್ದರು.

ಉದ್ಘಾಟನಾ ಸಮಾರಂಭ: ಯೋಜನಾ ಮತ್ತು ಯುವಸಬಲೀಕರಣ ಇಲಾಖೆ ನಿರ್ದೇಶಕ ಪ್ರದೀಪ್ ಡಿಸೋಜ ಉದ್ಘಾಟಿಸಿದರು. ಧಾರ್ಮಿಕ ಮುಖಂಡ ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಉಳ್ಳಾಲ್ತಿ ಅಮ್ಮನವರ ದೇವಸ್ಥಾನದ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್, ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ರೈ ಕಲ್ಲಿಮಾರ್, ಕೃಷಿಕ ಸುದರ್ಶನ್ ರಾವ್, ಮಂಗಳಗಂಗೋತ್ರಿ ಜೆಸಿಐ ನಿಕಟಪೂರ್ವ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ, ಸ್ಥಳೀಯ ಮುಖಂಡ ಯಾದವ ಶೆಟ್ಟಿ, ತಾಲೂಕು ವಾಲಿಬಾಲ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕೈರಂಗಳ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆಎಂಕೆ ಮಂಜನಾಡಿ, ನಿವೃತ್ತ ಮುಖ್ಯಶಿಕ್ಷಕ ಆನಂದ ಕೆ.ಅಸೈಗೋಳಿ, ಮೊದಲಾದವರು ಉಪಸ್ಥಿತರಿದ್ದರು. ಸ್ಮೀತಾ ಟೀಚರ್ ಬಹುಮಾನಿತರ ಹೆಸರು ವಾಚಿಸಿದರು. ಕಾರ್ಯಕ್ರಮ ಸಂಯೋಜಕ ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net