

ಮಂಗಳೂರು: ಮಳೆಗಾಲದ ಹಿನ್ನೆಲೆಯಲ್ಲಿ ನಗರದಲ್ಲಿರುವ ಅಪಾಯಕಾರಿ ಮರಗಳ ರೆಂಬೆ-ಕೊಂಬೆಗಳನ್ನು ತೆರವು ಮಾಡಲಾಗಿದ್ದು, ಕೆಲವು ಕಡೆಗಳಲ್ಲಿ ಅವುಗಳನ್ನು ವಿಲೇವಾರಿ ಮಾಡದೆ ಇದೀಗ ಸಮಸ್ಯೆಗೆ ಕಾರಣವಾಗಿದೆ. ಕೆಲವೆಡೆ ರಸ್ತೆ ಬದಿ, ುಟ್‌ಪಾತ್‌ಗಳಲ್ಲಿ ರಾಶಿ ಹಾಕಲಾಗಿದ್ದು, ಸಾರ್ವಜನಿಕರಿಗೆ ನಡೆಯಲು ಸಾಧ್ಯವಾದ ಸ್ಥಿತಿ ಇದೆ.
ಸದಾ ವಾಹನ ಜಂಜಾಟದಿಂದ ಕೂಡಿರುವ ಕೊಟ್ಟಾರ ಬಸ್ ನಿಲ್ದಾಣ ಪಕ್ಕದ ಇನ್ಫೋಸಿಸ್ ಬಳಿಯ ುಟ್‌ಪಾತ್‌ನಲ್ಲಿ ಕಳೆದ ಅನೇಕ ದಿನಗಳಿಂದ ಮರದ ರೆಂಬೆ-ಕೊಂಬೆ ರಾಶಿ ಇದೆ. ಇವುಗಳ ಎಲೆಗಳು ಒಣಗಿ ಹೋಗಿದ್ದು, ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಾಡಾಗಿದೆ. ಈ ರಸ್ತೆಯಲ್ಲಿ ವಾಹನಗಳು ವೇಗವಾಗಿ ಬರುತ್ತಿದ್ದು, ಪಾದಾಚಾರಿಗಳು ುಟ್‌ಪಾತ್ ಬಿಟ್ಟು ರಸ್ತೆಯಲ್ಲೇ ನಡೆಯಬೇಕಾದ ಪರಿಸ್ಥಿತಿ ಇದೆ. ಇಲ್ಲೇ ಪಕ್ಕದಲ್ಲಿ ಶಾಲೆ, ಅಂಗನವಾಡಿ ಇರುವ ಕಾರಣ ದಿನಂಪ್ರತಿ ವಿದ್ಯಾರ್ಥಿಗಳೂ ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಈ ಭಾಗದಲ್ಲಿ ಸಣ್ಣ ಮಳೆ ಬಂದರೆ ಕೃತಕ ನೆರೆ ಆವರಿಸಿ, ಸಮಸ್ಯೆ ಸೃಷ್ಟಿಯಾಗುತ್ತದೆ.
ಅಲ್ಲೇ ಪಕ್ಕದ ಕೊಟ್ಟಾರ ಕ್ರಾಸ್ ರಸ್ತೆಯಲ್ಲಿಯೂ ಮರದ ಕೊಂಬೆ-ರೆಂಬೆಗಳು ರಾಶಿ ಇದೆ. ಇವುಗಳಲ್ಲಿನ ಎಲೆಗಳು ಕೂಡ ಒಣಗಿ ರಸ್ತೆಗೆ ಹರಡುವ ಸ್ಥಿತಿ ಇದೆ. ಜೋರಾಗಿ ಮಳೆ ಸುರಿದರೆ ಅನಾಹುತಗಳು ಸಂಭವಿಸಬಹುದಾದ ಸಾಧ್ಯತೆಯೂ ಇದೆ. ಅಂಗಡಿಗುಡ್ಡೆಯ ಅಂಬೇಡ್ಕರ್ ಭವನ ತಿರುವು, ಉರ್ವ ಪೊಲೀಸ್ ಠಾಣೆ ಬಳಿಯ ರಸ್ತೆ ಆರಂಭದಲ್ಲಿಯೂ ಇದೇ ರೀತಿ ಮರದ ರೆಂಬೆ-ಕೊಂಬೆಗಳನ್ನು ರಾಶಿ ಇಡಲಾಗಿದೆ.
ಕಳೆದ ವರ್ಷ ಜೈಲ್ ರಸ್ತೆ ಬದಿಯಲ್ಲಿ ಇದ್ದ ಮರವೊಂದನ್ನು ಕತ್ತರಿಸಿದ ಬಳಿಕ ಅದರ ದಿಮ್ಮಿಗಳು ಸುಮಾರು 6 ತಿಂಗಳವರೆಗೆ ಸ್ಥಳದಲ್ಲೇ ಇತ್ತು. ನೆಹರೂ ಮೈದಾನ ರಸ್ತೆಯಲ್ಲೂ ಮರವೊಂದು ಗಾಳಿಗೆ ಉರುಳಿ ಬಿದ್ದಿದ್ದು, ಅದರ ದಿಮ್ಮಿಗಳೂ ರಸ್ತೆ ಬದಿಯಲ್ಲೇ ಇತ್ತು. ನಂತೂರು ಬಳಿ ಕಳೆದ ವರ್ಷ ಕತ್ತರಿಸಿದ ಮರದ ದಿಮ್ಮಿ ಇನ್ನೂ ಅಲ್ಲೇ ಇದ್ದು, ವಿಲೇವಾರಿ ಮಾಡಿಲ್ಲ. ಇನ್ನಷ್ಟು ಮಳೆ ಸುರಿಯುವ ಮೊದಲು ನಗರದ ಅಲ್ಲಲ್ಲಿ ರಾಶಿ ಹಾಕಲಾದ ಮರದ ರೆಂಬೆ-ಕೊಂಬೆಗಳನ್ನು ತೆರವು ಮಾಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ನಗರದಲ್ಲಿ ಮರದ ರೆಂಬೆಗಳನ್ನು ಕಡಿದ ಬಳಿಕ ತಕ್ಷಣ ಸೂಕ್ತ ಸ್ಥಳಗಳಿಗೆ ವಿಲೇವಾರಿ ಮಾಡುವುದು ಅವಶ್ಯ. ಪಾಲಿಕೆ ಅಧಿಕಾರಿಗಳಿಗೆ ಈ ನಿಟ್ಟಿನಲ್ಲಿ ಈಗಾಗಲೇ ಸೂಚನೆ ನೀಡಲಾಗಿದೆ. ಇನ್ನೂ ಉಳಿದಿದ್ದರೆ ಮತ್ತೆ ಅಧಿಕಾರಿಗಳ ಗಮನಕ್ಕೆ ತಂದು ವಿಲೇವಾರಿ ಮಾಡಲು ಸೂಚಿಸಲಾಗುವುದು.
ಸುಧೀರ್ ಶೆಟ್ಟಿ ಕಣ್ಣೂರು
ಮೇಯರ್