ಮಂಗಳೂರು ಕರಾವಳಿ ಉತ್ಸವದ ಮೆರವಣಿಗೆ ಹಿನ್ನೆಲೆ ವಾಹನ ದಟ್ಟಣೆ ಪರದಾಡಿದ ಜನ

mng--21 dec Trafic jam
Published on

ಮಂಗಳೂರು: ಕರಾವಳಿ ಉತ್ಸವದ ಮೆರವಣಿಗೆ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆ ಬಂದ್ ಆದ ಕಾರಣ ನಗರದಾದ್ಯಂತ ಶನಿವಾರ ಸಂಜೆ ವಾಹನ ದಟ್ಟಣೆ ಉಂಟಾಯಿತು. ಇದರ ಪರಿಣಾಮ ರಾಷ್ಟ್ರೀಯ ಹೆದ್ದಾರಿಗಳಿಗೂ ತಟ್ಟಿದ್ದು, ರಾತ್ರಿಯ ತನಕ ವಾಹನಗಳು ನಿಧಾನಗತಿಯಲ್ಲಿ ಸಾಗಿದವು.

ಅಲೋಶಿಯಸ್ ಕಾಲೇಜಿನಿಂದ ಕರಾವಳಿ ಉತ್ಸವ ಮೈದಾನದ ತನಕ ಮೆರವಣಿಗೆ ಸಾಗಿ ಬಂದಿದ್ದು, ಈ ಸಂದರ್ಭ ಈ ರಸ್ತೆಯಲ್ಲಿ ಸಾಗುವ ವಾಹನಗಳ ಸಂಚಾರ ಮಾರ್ಪಾಡು ಮಾಡಲಾಗಿತ್ತು. ಕೆಎಸ್‌ಆರ್‌ಟಿಸಿ ರಸ್ತೆ, ಸಿಟಿ ಸೆಂಟರ್, ಎಂ.ಗೋವಿಂದ ಪೈ ವೃತ್ತ, ಪಿವಿಎಸ್, ಕೊಡಿಯಾಲಗುತ್ತು, ಬಳ್ಳಾಲ್‌ಬಾಗ್, ಲಾಲ್‌ಬಾಗ್, ಕೆಎಸ್‌ಆರ್‌ಟಿಸಿ, ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ತನಕ ಸಂಚರಿಸುವ ಎಲ್ಲಾ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸಿಕೊಂಡು ಸಂಚರಿಸಿದ ಕಾರಣ ಒಳರಸ್ತೆಗಳಲ್ಲಿ ಹೆಚ್ಚಿನ ವಾಹನ ದಟ್ಟಣೆ ಉಂಟಾಯಿತು.

ಕಂಕನಾಡಿ, ಹಂಪನಕಟ್ಟೆ, ಫಳ್ನೀರ್, ಪಂಪ್‌ವೆಲ್, ಕುಂಟಿಕಾನ ಸೇರಿದಂತೆ ನಗರದ ಬಹುತೇಕ ಕಡೆ ರಾತ್ರಿ ತನಕ ವಾಹನ ದಟ್ಟಣೆ ಕಂಡು ಬಂತು. ಕಂಕನಾಡಿಯಿಂದ ಪಡೀಲ್ ತನಕ, ರಾಷ್ಟ್ರೀಯ ಹೆದ್ದಾರಿ 66ರಲ್ಲೂ ವಾಹನ ದಟ್ಟಣೆ ಉಂಟಾಗಿ ಜನರು ಪರದಾಡುವಂತಾಯಿತು. ಆಂಬ್ಯುಲೆನ್ಸ್‌ಗಳು ಸೈರನ್ ಹಾಕುತ್ತಾ ಮುಂದಕ್ಕೆ ಹೋಗಲು ಚಡಪಡಿಸುವ ದೃಶ್ಯ ಕಂಡು ಬಂತು. ತುರ್ತು ತೆರಳುವವರಿಗೆ ಇದರಿಂದ ಅಡಚಣೆ ಉಂಟಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net