

ಮಂಗಳೂರು: ತುಳುಕೂಟದ ವತಿಯಿಂದ ತುಳು ಮಾತೃಭಾಷೆಯಾಡುವ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭೆಗಳನ್ನು ಕೊಡ್ಮಾಣ್ ಸರ್ಕಾರಿ ಪ್ರೌಢಶಾಲೆಯಲ್ಲಿ ಪುರಸ್ಕರಿಸಲಾಯಿತು.
ಕೂಟದ ಉಪಾಧ್ಯಕ್ಷ ಜೆ.ವಿ.ಶೆಟ್ಟಿ, ಮೇರಮಜಲು ಗ್ರಾ.ಪಂ. ಅಧ್ಯಕ್ಷೆ ಚೆನ್ನಮ್ಮ, ಮಾಜಿ ಅಧ್ಯಕ್ಷೆ ಜಯಶ್ರೀ ಎಂ .ಕರ್ಕೇರ, ಸದಸ್ಯರಾದ ಹರಿಣಾಕ್ಷಿ, ಸವಿತಾ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಕೆ.ದೇವದಾಸ್, ಪಿ.ಎ.ಪೂಜಾರಿ, ಮುಖ್ಯ ಶಿಕ್ಷಕಿ ಟಿ.ಭಾಸ್ಕರ ರಾವ್, ಚಂದ್ರಶೇಖರ ಸುವರ್ಣ, ಸುಜಾತಾ ಸುವರ್ಣ ಉಪಸ್ಥಿತರಿದ್ದರು.
ಶುಭೀಕ್ಷಾ (ಕೊಡ್ಮಾಣ್ ಸರ್ಕಾರಿ ಪ್ರೌಢಶಾಲೆ), ಗಗನ್ ಜೆ. ಸುವರ್ಣ(ಕೆನರಾ ಪ.ಪೂ.ಕಾಲೇಜ್), ಮಾನಸ್ ಎಸ್.( ಪೂರ್ಣಪ್ರಜ್ಞ ಪ.ಪೂ.ಕಾಲೇಜ್, ಉಡುಪಿ) ಪ್ರತಿಭಾ ಪುರಸ್ಕಾರ ಪಡೆದರು. ಕೂಟದ ಸದಸ್ಯ ದಿನೇಶ್ ಕುಂಪಲ ವಿದ್ಯಾರ್ಥಿಗಳನ್ನು ಪರಿಚಯಿಸಿದರು.
ಪ್ರ.ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ನಿರ್ವಹಿಸಿದರೆ, ಶಿಕ್ಷಕಿ ನಿರ್ಮಲಾ ವಂದಿಸಿದರು.