ಕರಾವಳಿಯಾದ್ಯಂತ ಅನರ್‌ಕಲಿ ತುಳು ಸಿನಿಮಾ ತೆರೆಗೆ

mng--23 Aug Anarkali
Published on

ಮಂಗಳೂರು: ಲಕುಮಿ ಸಿನಿ ಕ್ರಿಯೇಷನ್ ಮತ್ತು ಲೋ ಬಜೆಟ್ ಪ್ರೊಡಕ್ಷನ್ ನಿರ್ಮಾಣದಲ್ಲಿ ಹರ್ಷಿತ್ ಸೊಮೇಶ್ವರ ನಿರ್ದೇಶನದಲ್ಲಿ ತಯಾರಾದ ಅನರ್ ಕಲಿ ತುಳು ಸಿನಿಮಾ ಶುಕ್ರವಾರ ಭಾರತ್ ಸಿನಿಮಾಸ್‌ನಲ್ಲಿ ಬಿಡುಗಡೆಗೊಂಡಿತು.


ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ಉದ್ಘಾಟಿಸಿದರು. ತುಳು ಭಾಷೆಯ ಉಳಿವಿಗಾಗಿ ತುಳು ನಾಟಕ ಮತ್ತು ಸಿನಿಮಾಗಳ ಪಾತ್ರ ಮಹತ್ವದ್ದಾಗಿದೆ. ಒಳ್ಳೆಯ ಪ್ರಯತ್ನವನ್ನು ತುಳುನಾಡಿನ ಪ್ರೇಕ್ಷಕರು ಖಂಡಿತ ಬೆಂಬಲಿಸುತ್ತಾರೆ ಎಂದರು.
ಕದ್ರಿ ನವನೀತ್ ಶೆಟ್ಟಿ ಮಾತನಾಡಿ, ನಾವು ಬಾಲ್ಯದಲ್ಲಿ ನೋಡುತ್ತಿದ್ದ ಅನರ್‌ಕಲಿ ವೇಷವನ್ನು ಮತ್ತೊಮ್ಮೆ ತುಳುನಾಡಿನ ಜನರಿಗೆ ಪರಿಚಯಿಸಲು ಚಿತ್ರತಂಡ ಮುಂದಾಗಿದೆ ಎಂದರು.


ಪ್ರಕಾಶ್ ಪಾಂಡೇಶ್ವರ್ ಮಾತನಾಡಿ, ನಾನು ಸಿನಿಮಾ ನೋಡಿದ್ದೇನೆ ನನಗೆ ತುಂಬಾ ಖುಷಿಯಾಗಿದೆ. ಬಹಳ ಸಮಯದ ಬಳಿಕ ಒಂದೊಳ್ಳೆ ಸಿನಿಮಾ ನೋಡಲು ಸಿಕ್ಕಿದೆ ಎಂದರು.


ಅರವಿಂದ್ ಬೋಳಾರ್ ಮಾತಾಡಿ, ತುಳುವರು ಸಿನಿಮಾ ನೋಡಿ ಗೆಲ್ಲಿಸಿದಲ್ಲಿ ನಮ್ಮ ನಿರ್ಮಾಪಕರ ಶ್ರಮ ಸಾರ್ಥಕವಾಗುತ್ತದೆ. ಎಲ್ಲರೂ ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಆಶಿರ್ವದಿಸಿ ಎಂದರು.


ತುಳು ಚಲನ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್ ಧನರಾಜ್, ಭೋಜರಾಜ ವಾಮಂಜೂರು, ನಾಯಕ ನಟ ವಿಜಯ್ ಶೋಭರಾಜ್ ಪಾವೂರು, ನಟಿ ಮಧುರಾ ಆರ್.ಜೆ., ಪುರುಷೋತ್ತಮ ಭಂಡಾರಿ ಅಡ್ಯಾರ್, ಪ್ರದೀಪ್ ಆಳ್ವ ಕದ್ರಿ, ಗಿರೀಶ್ ಎಂ ಶೆಟ್ಟಿ ಕಟೀಲು, ಕಿಶೋರ್ ಡಿ. ಶೆಟ್ಟಿ, ದಿವಾಕರ ಶೆಟ್ಟಿ, ಮೋಹನ್ ಕೊಪ್ಪಲ, ಇಸ್ಮಾಯಿಲ್ ಮೂಡುಶೆಡ್ಡೆ, ತಾರಾನಾಥ್ ಶೆಟ್ಟಿ ಬೋಳಾರ್, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಬಾಳ ಮೊದಲಾದವರಿದ್ದರು.


ಅನರ್ ಕಲಿ ತುಳು ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಪಿವಿಆರ್, ಭಾರತ್ ಸಿನಿಮಾಸ್, ಸಿನಿಪೊಲಿಸ್, ಸುರತ್ಕಲ್ ನಲ್ಲಿ ನಟರಾಜ್, ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಬೆಳ್ತಂಗಡಿಯಲ್ಲಿ ಭಾರತ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್ ನಲ್ಲಿ ತೆರೆ ಕಂಡಿದೆ.


ಸಿನಿಮಾದಲ್ಲಿ ಒಂದು ಕಥಾಹಂದರವನ್ನು ಇಟ್ಟುಕೊಂಡು ಸಂಪೂರ್ಣ ಹಾಸ್ಯಭರಿತವಾಗಿ ಸಿನಿಮಾ ಸಾಗಿದೆ. ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ದೀಪಕ್ ಪಾಣಾಜೆ, ರವಿ ರಾಮಕುಂಜ, ಪುಷ್ಪರಾಜ್ ಬೊಳ್ಳೂರು, ಸುಜಾತ ಶಕ್ತಿನಗರ, ನಮಿತಾ ಕುಳೂರು ಮುಖ್ಯ ಭೂಮಿಕೆಯಲ್ಲಿದ್ದಾರೆ. ನಾಯಕ ನಟನಾಗಿ ವಿಜಯ್ ಶೋಭರಾಜ್ ಪಾವೂರು, ನಾಯಕಿಯಾಗಿ ಮಧುರ ಆರ್.ಜೆ ಅಭಿನಯಿಸಿದ್ದಾರೆ. ಇನ್ನುಳಿದಂತೆ ಮೋಹನ್ ಕೊಪ್ಪಲ, ಹರ್ಷಿತ್ ಸೋಮೇಶ್ವರ, ಮಂಜು ರೈ ಮುಳೂರು, ರಂಜನ್ ಬೋಳೂರು ಶರಣ್ ಕೈಕಂಬ, ಪ್ರಕಾಶ್ ಶೆಟ್ಟಿ ಧರ್ಮನಗರ, ವಾತ್ಸಲ್ಯ ಸಾಲಿಯಾನ್ , ವಿನಾಯಕ್ ಜೆಪ್ಪು ತಾರಾಗಣದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net