ತುಳು ಭಾಷಾ ಬೆಳವಣಿಗೆಗಾಗಿ ಒಟ್ಟಾಗಿ ಶ್ರಮಿಸೋಣ -ತುಳು ಕೂಟ ಕುಡ್ಲದ ಬಂಗಾರ್ ಪರ್ಬ ದ ಸಮಾರೋಪದಲ್ಲಿ ಎ.ಸಿ.ಭಂಡಾರಿ

mng--5 Jan Thulu koota
Published on

ಮಂಗಳೂರು: ತುಳು ಭಾಷಿಗರು ವಿಶ್ವದಾದ್ಯಂತ ಪಸರಿಸಿದ್ದಾರೆ. ಪರಸ್ಪರ ಭೇಟಿಯಾದಾಗ ಭಾಷಾ ಪ್ರೇಮವನ್ನು ಮೆರೆದು ಹರ್ಷಿಸುತ್ತಾರೆ. ಹೀಗೆ ಹೃದಯವನ್ನು ಬೆಸೆಯುವ ಭಾಷೆ ತುಳು ಆಗಿದೆ. ಅದರ ಬೆಳವಣಿಗೆಗೆ ಶ್ರಮಿಸೋಣ ಎಂದು ತುಳು ಒಕ್ಕೂಟದ ಅಧ್ಯಕ್ಷ ಎ.ಸಿ.ಭಂಡಾರಿ ಹೇಳಿದರು.

ನಗರದ ಖಾಸಗಿ ಹೊಟೇಲ್‌ನಲ್ಲಿ ಶನಿವಾರ ನಡೆದ ತುಳು ಕೂಟ ಕುಡ್ಲದ ಬಂಗಾರ್ ಪರ್ಬ ದ ಸಮಾರೋಪ ಸಮಾರಂಭದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.

ಸಾಹಿತಿ ಮುದ್ದು ಮೂಡುಬೆಳ್ಳೆ, ರಾಜೇಶ್ ಆಳ್ವ ಬದಿಯಡ್ಕ, ಪಿ.ಎ .ಪೂಜಾರಿ ಸಲಹೆ ನೀಡಿದರು. ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ ಅಧ್ಯಕ್ಷತೆ ವಹಿಸಿದ್ದರು. ಜೊತೆ ಕಾರ್ಯದರ್ಶಿ ನಾಗೇಶ್ ದೇವಾಡಿಗ ಕದ್ರಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಪೆಲತ್ತಡಿ ಪದ್ಮನಾಭ ಕೋಟ್ಯಾನ್ ಪ್ರಸ್ತಾವನೆಗೈದರು. ಉಪಾಧ್ಯಕ್ಷ ಜೆ. ವಿ.ಶೆಟ್ಟಿ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಕಾರ್ಯಕ್ರಮ ನಿರ್ವಹಿಸಿದರು. ಖಚಾಂಚಿ ಚಂದ್ರಶೇಖರ ಸುವರ್ಣ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net