ಜೂರಿಕ್ ಕನ್ನಡ ಕೂಟ ಸಂಚಾಲಕಿ ಡಾ.ಪ್ರಭಿತಾಗೆ ಕಸಾಪ ಗೌರವ

mng--27 Dec Ka sa pa
Published on

ಮಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ವಿದೇಶಿ ರಾಯಭಾರಿ ಡಾ.ಮುರಲೀ ಮೋಹನ್ ಚೂಂತಾರ್ ಅವರ ಮನೆ ‘ಸರೋಜಿನಿ’ಯಲ್ಲಿ ಗುರುವಾರ ‘ಜೂರಿಕ್ ನಲ್ಲಿ ಕನ್ನಡ ಡಿಂಡಿಮ’ ಎಂಬ ಕಾರ್ಯಕ್ರಮ ಜರುಗಿತು.

ಸ್ವಿಟ್ಜಲೆರ್ಂಡ್ ಜೂರಿಕ್ ಕನ್ನಡ ಕೂಟದ ಸಂಚಾಲಕಿ ಡಾ.ಪ್ರಭಿತಾ ಮುಖ್ಯ ಅತಿಥಿಯಾಗಿದ್ದರು. ಮಂಡ್ಯದಲ್ಲಿ ನಡೆದ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಆಗಮಿಸಿದ್ದ ಅವರು ಹಿಂತಿರುಗುವ ಹಾದಿಯಲ್ಲಿ ದ. ಕ. ಜಿಲ್ಲಾ ಮಂಗಳೂರು ತಾಲೂಕು ಘಟಕದ ಪರಿಷತ್ತಿಗೆ ಭೇಟಿ ನೀಡಿದರು. ಅಲ್ಲಿನ ಕನ್ನಡ ಸಾಹಿತ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ, ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಲ್ಲಿ ಕನ್ನಡ ಉಳಿಸಿ ಬೆಳೆಸಲು ಪರಿಷತ್ತಿನ ಸಹಕಾರ ಕೋರಿದರು. ಪರಿಷತ್ತು ವತಿಯಿಂದ ಅವರನ್ನು ಗೌರವಿಸಲಾಯಿತು.

ಪರಿಷತ್ತಿನ ಘಟಕದ ಅಧ್ಯಕ್ಷ ಡಾ. ಮಂಜುನಾಥ ಎಸ್ ರೇವಣಕರ್ ಅಧ್ಯಕ್ಷತೆ ವಹಿಸಿದ್ದರು.

ಡಾ. ಮುರಲೀ ಮೋಹನ್ ಚೂಂತಾರ್ ರವರು ಸ್ವಾಗತಿಸಿದರು. ಗೌರವ ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಗೌರವ ಕಾರ್ಯದರ್ಶಿ ಎನ್. ಗಣೇಶ್ ಪ್ರಸಾದ್ ಜೀ ವಂದಿಸಿದರು. ಪರಿಷತ್ತಿನ ಸುಖಲಾಕ್ಷಿ ಸುವರ್ಣ, ಸನತ್ ಕುಮಾರ್ ಜೈನ್,ರತ್ನಾವತಿ ಜೆ.ಬೈಕಾಡಿ, ಡಾ.ಶ್ರೀಕೃಷ್ಣ ಭಟ್ಟ ಸುಣ್ಣಂಗುಳಿ, ರವೀಂದ್ರನಾಥ್ ಕೆ. ಪಿ., ಗುರು, ಡಾ.ರಾಜಶ್ರೀ ಮೋಹನ್, ಸಿರಿ ಮತ್ತಿತರ ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ಕನ್ನಡ ಗೀತೆಯೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net