

ಮಂಗಳೂರು: ಮಾಂಸಕ್ಕಾಗಿ ವಧೆ ಮಾಡಲು ಹಿಂಸಾತ್ಮಕವಾಗಿ ಕಟ್ಟಿ ಹಾಕಿದ್ದ 12 ಜಾನುವಾರುಗಳನ್ನು ಸುರತ್ಕಲ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾಟಿಪಳ್ಳ ಗ್ರಾಮದ 8ಎ ಬ್ಲಾಕ್ ಮಸೀದಿ ಬಳಿ ಖಾಲಿ ಆವರಣದೊಳಗೆ ದಾಳಿ ಮಾಡಿದಾಗ ಸುಮಾರು 12 ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಹಾಕಿರುವುದು ಗಮನಕ್ಕೆ ಬಂದಿದೆ. ಇವುಗಳ ಅಂದಾಜು ಮೌಲ್ಯ 3 ಲಕ್ಷ ರೂ. ಆಗಿದ್ದು, ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ ಇಬ್ರಾಹಿಂ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.