

ಮಂಗಳೂರು: ಸ್ಟಾಕ್ ಟ್ರೇಡಿಂಗ್ ಹೆಸರಿನಲ್ಲಿ ಹೂಡಿಕೆ ಮಾಡಿಸಿ 18.53 ಲಕ್ಷ ರೂ. ವಂಚಿಸಿರುವ ಪ್ರಕರಣ ನಡೆದಿದೆ.
ವಿಜಯ ಕುಮಾರ್ ವಂಚನೆಗೊಳಗಾದವರು. ಅವರು ಫೇಸ್‌ಬುಕ್‌ನಲ್ಲಿ ಸ್ಟಾಕ್ ಟ್ರೇಡಿಂಗ್ ಎಂಬ ಜಾಹೀರಾತು ನೋಡಿ ಅದರಲ್ಲಿದ್ದ ಲಿಂಕ್‌ನ ಮೂಲಕ 2013ರ ಡಿ.2ರಂದು ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಸೇರ್ಪಡೆಯಾಗಿದ್ದರು. ಆ ಗ್ರೂಪ್‌ನಲ್ಲಿ ಹಲವಾರು ಅಡ್ಮಿನ್, ಸದಸ್ಯರಿದ್ದರು. ಗ್ರೂಪ್‌ನ ಚೀಫ್ ಅಡ್ಮಿನ್ ಅಗಿದ್ದ ಅಮಿತ್ ಶಾ ಎಂಬಾತ ಪ್ರತಿ ದಿನ ಆನ್‌ಲೈನ್ ವೀಡಿಯೋ ಕ್ಲಾಸ್ ಮೂಲಕ ಸ್ಟಾಕ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿ ದುಪ್ಪಟ್ಟು ಮಾಡುವ ಬಗ್ಗೆ ವಿವರಿಸುತ್ತಿದ್ದ. ವಿಜಯ ಕುಮಾರ್ ಅವರು ಅದನ್ನು ಸತ್ಯವೆಂದು ಭಾವಿಸಿ ಹಣ ತೊಡಗಿಸಿದ್ದರು.
2024ರ ಜ.11ರಿಂದ ಫೆ.5ರವರೆಗೆ ಹಂತ ಹಂತವಾಗಿ ಒಟ್ಟು 18.53 ಲ.ರೂ.ಗಳನ್ನು ಪಾವತಿಸಿದ್ದರು. ಅದನ್ನು ಹಿಂಪಡೆಯಲು ಸ್ಟಾಕ್ ಟ್ರೇಡಿಂಗ್ ಕಂಪೆನಿಯ ಕಸ್ಟಮರ್ ಕೇರ್‌ರವರನ್ನು ಸಂರ್ಪಿಕಿಸಿದಾಗ ಶೇ.40 ಕಮಿಷನ್ ಆಗಿ ನೀಡುವಂತೆ ಹಾಗೂ ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದರು. ಆಗ ಅನುಮಾನ ಬಂದ ವಿಜಯ ಕುಮಾರ್ ಅವರು ಸ್ನೇಹಿತರಲ್ಲಿ ವಿಚಾರಿಸಿದಾಗ ಮೋಸ ಹೋಗಿರುವುದು ಗೊತ್ತಾಯಿತು. ಈ ಬಗ್ಗೆ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.