ಶ್ರೀದೇವಿ ಇನ್ಸ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿಯ ಕೆಂಜಾರು ಕ್ಯಾಂಪಸ್‌ನಲ್ಲಿ ತಾಂತ್ರಿಕ-ಸಾಂಸ್ಕೃತಿಕ ಉತ್ಸವ ಶ್ರೀದೇವಿ ಸಂಭ್ರಮ್-2024

kenjar
Published on

ಮಂಗಳೂರು: ಕೆಂಜಾರಿನ ಶ್ರೀದೇವಿ ಇನ್ಸ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿಯ ಕೆಂಜಾರು ಕ್ಯಾಂಪಸ್‌ನಲ್ಲಿ ಶ್ರೀದೇವಿ ಸಂಭ್ರಮ್-2024 ರಾಷ್ಟ್ರೀಯ ಮಟ್ಟದ ತಾಂತ್ರಿಕ ಹಾಗೂ ಸಾಂಸ್ಕೃತಿಕ ಉತ್ಸವ ಡಿ.6 ಹಾಗೂ 7ರಂದು ನಡೆಯಲಿದೆ.

ಅಂದು ಬೆಳಗ್ಗೆ 9.15ಕ್ಕೆ ಮಂಗಳೂರು ಇನ್‌ೆಸಿಸ್ ಲಿಮಿಟೆಡ್‌ನ ಪ್ರಿನ್ಸಿಪಾಲ್ ಟೆಕ್ನಾಲಜಿ ಆರ್ಕಿಟೆಕ್ಟ್ ಶಂಕರಸುಬ್ಬು ಅರುಣಾಚಲಂ ಅವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀದೇವಿ ಎಜ್ಯುಕೇಶನ್ ಟ್ರಸ್ಟ್‌ನ ಚೆಯರ್‌ಮ್ಯಾನ್ ಡಾ.ಎ.ಸದಾನಂದ ಶೆಟ್ಟಿ ವಹಿಸಲಿದ್ದಾರೆ. ವೈಸ್ ಚೆಯರ್‌ಮ್ಯಾನ್ ನಿಧೀಶ್ ಎಸ್. ಶೆಟ್ಟಿ, ಟ್ರಸ್ಟಿ ಪ್ರಿಯಾಂಕ ಎನ್.ಶೆಟ್ಟಿ ಉಪಸ್ಥಿತರಿರುವರು ಎಂದು ಕಾಲೇಜಿನ ಪ್ರಿನ್ಸಿಪಾಲ್ ಹಾಗೂ ನಿರ್ದೇಶಕ ಡಾ.ಕೆ.ಇ.ಪ್ರಕಾಶ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶ್ರೀದೇವಿ ಸಂಭ್ರಮ್-2024 ರಲ್ಲಿ ದೇಶದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ತಾಂತ್ರಿಕ ಪರಿಣತಿ ಹಾಗೂ ಸಾಂಸ್ಕೃತಿಕ ಪ್ರತಿಭೆಯನ್ನು ಪ್ರದರ್ಶಿಸುವ ವೇದಿಕೆಯಾಗಲಿದೆ. ಈ ಸಂರ್ದಭದಲ್ಲಿ ವಿದ್ಯಾರ್ಥಿಗಳಿಗೆ ಕೋಡಿಂಗ್, ಪೇಪರ್ ಪ್ರಸೆಂಟೇಶನ್, ಗೇಮ್ಸ್, ಕ್ವಿಜ್ ಮತ್ತು ತಾಂತ್ರಿಕ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಈ ಮೂಲಕ ಒಳ್ಳೆಯ ಅನುಭವವನ್ನು ಮೈಗೂಡಿಸಿಗೊಳ್ಳಬಹುದು. ವಿದ್ಯಾರ್ಥಿಗಳ ಮನೋರಂಜನೆಗಾಗಿ ಇನ್ನಿತರ ಆಕರ್ಷಕ ಲಘು ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ ಎಂದರು.

ಗ್ರಾೃಂಡ್ ಈವೆಂಟ್, ಬ್ಯಾಟಲ್ ಆ್ ಬ್ಯಾಂಡ್ಸ್, ಆತ್ಯಾಕರ್ಷಕ ಪ್ರದರ್ಶನಗಳಲ್ಲಿ ಸ್ಪರ್ಧಿಸುವ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ ಬ್ಯಾಂಡ್‌ಗಳನ್ನು ಒಳಗೊಂಡಿದ್ದು, ಸಂಭ್ರಮದ ಅಂಗವಾಗಿ ಡಿ.ಜೆ ರಾಯ ಹಾಗೂ ಡ್ರಾಗನ್ ಡ್ಯಾನ್ಸ್ ಶೋ ಡಿ. 6 ರಂದು ಪ್ರದರ್ಶನಗೊಳ್ಳಲಿದೆ. ಡಿ. 7 ರಂದು ಬಾಲಿವುಡ್ ಸೆನ್ಸೆಷನ್ ದಿವ್ಯಾಕುಮಾರ್ ಅವರ ವಿಶೇಷ ಸಂಗೀತ ಕಚೇರಿ ನಡೆಯಲಿದ್ದು, ಅವರು ಈ ವರ್ಷದ ಟಾಪ್ ಹಿಟ್ ಹಾಡುಗಳನ್ನು ಹಾಡಲಿದ್ದಾರೆ. ಡಿ.7ರಂದು ಸಮಾರೋಪ ಸಮಾರಂಭದಲ್ಲಿ ಶ್ರೀದೇವಿ ಸಂಭ್ರಮ್-2024ರ ವಿಜೇತರಿಗೆ ಬಹುಮಾನ ಹಾಗೂ ಟ್ರೋಫಿಗಳನ್ನು ವಿತರಿಸಲಾಗುತ್ತದೆ ಎಂದರು.

ಈ ಸಂದರ್ಭ ವೈಸ್ ಪ್ರಿನ್ಸಿಪಾಲ್ ಡಾ. ನೇತ್ರಾವತಿ ಪಿ.ಎಸ್. ಮತ್ತು ಶ್ರೀದೇವಿ ಸಂಭ್ರಮ್-2024 ಸಂಚಾಲಕಿ ಪ್ರೊ.ರಶ್ಮಾ ಜೈನ್ ಹಾಗೂ ವಿದ್ಯಾರ್ಥಿ ಸಂಚಾಲಕ ರೋಹನ್ ಕೆ. ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net