ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಕಾರ್ಗಿಲ್ ವಿಜಯೋತ್ಸವ

mng--28 july Bharathi kargil
Published on

ಮಂಗಳೂರು: ನಂತೂರಿನ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಜರುಗಿತು.


ಗೃಹರಕ್ಷಕ ದಳದ ಕಮಾಂಡೆಟ್ ಡಾ.ಮುರಲೀ ಮೋಹನ್ ಚೂಂತಾರು ಮುಖ್ಯ ಅತಿಥಿಯಾಗಿದ್ದರು. ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಗೈದ ವೀರ ಯೋಧರನ್ನು ಸ್ಮರಿಸುತ್ತಾ ದೇಶರಕ್ಷಣೆ ಮಾಡುತ್ತಿರುವ ಯೋಧರಿಂದಾಗಿ ನಾವೆಲ್ಲರೂ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ,ಆದರೆ ದೇಶ ಉಳಿಸುವ ಜವಾಬ್ದಾರಿ ನಮ್ಮದೂ ಆಗಿರುತ್ತದೆ ಎಂದರು.


ಅತಿಥಿಯಾಗಿದ್ದ ಹವಾಲ್ದಾರ್ ಕೇಶವ ಬಿ.ಎ. ಅವರು, ವಿದ್ಯಾರ್ಥಿಗಳು ದೇಶಸೇವೆಯ ಪುಣ್ಯ ಕೆಲಸದಲ್ಲಿ ಭಾಗಿಗಳಾಗಬೇಕು ಎಂದರು.
ಸಂಸ್ಥೆಯ ಸೇವಾ ಸಮಿತಿಯ ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ, ಪ್ರಾಂಶುಪಾಲರಾದ ಗಂಗಾರತ್ನ ಮೊದಲಾದವರಿದ್ದರು.


ಪದವಿ ಪೂರ್ವ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಸಾಲು ಹಣತೆಗಳನ್ನು ಹಚ್ಚಿ ಹುತಾತ್ಮರಾದ ವೀರ ಯೋಧರಿಗೆ ನಮನಗಳನ್ನು ಸಲ್ಲಿಸಿದ ನಂತರ ದೇಶಪ್ರೇಮವನ್ನು ಬಿಂಬಿಸುವ ಭಾಷಣ,ಹಾಡು ನೃತ್ಯಗಳನ್ನು ಪ್ರಸ್ತುತಪಡಿಸಿದರು.


ಉಪನ್ಯಾಸಕಿಯರಾದ ಸಂಗೀತಾ ಮತ್ತು ಸ್ವಾತಿ ಅತಿಥಿಗಳನ್ನು ಪರಿಚಯಿಸಿದರು. ಅಕ್ಷತಾ ಸ್ವಾಗತಿಸಿ, ಶ್ರುತಿ ವಂದಿಸಿದರು. ಮೇಘನಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net