ರಾಜ್ಯದ ವಿಶೇಷ ಶಾಲಾ ಮುಖ್ಯಸ್ಥರಿಂದ ಸ್ಪೀಕರ್‌ಗೆ ಮನವಿ

mng--28 June speaker manavi
Published on

ಮಂಗಳೂರು: ರಾಜ್ಯ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಂಘ ಮತ್ತು ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟದ ವತಿಯಿಂದ ‘ಶಿಶು ಕೇಂದ್ರಿತ ಸಹಾಯಧನ ಯೋಜನೆ’ ಮೂಲಕ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಅನುದಾನ ಪಡೆಯುತ್ತಿರುವ ವಿಶೇಷ ಶಾಲಾ ಮುಖ್ಯಸ್ಥರು ಶುಕ್ರವಾರ ಸ್ಪೀಕರ್ ಯು.ಟಿ.ಖಾದರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.


ಶಿಶು ಕೇಂದ್ರಿಕೃತ ಸಹಾಯಧನ ಯೋಜನೆಯ ಅನುದಾನ ಪಡೆಯುತ್ತಿರುವ ಶಾಲೆಯ ವಿಶೇಷ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರಿಗೆ 1982ರ ಅನುದಾನ ರೀತಿಯಲ್ಲಿ ವಿಶೇಷ ಶಿಕ್ಷಕರು ಹಾಗೂ ಸಿಬ್ಬಂದಿಗಳು ವೇತನ ಪಡೆಯುತ್ತಿರುವ ರೀತಿಯಲ್ಲೇ ಆರ್ಥಿಕ ಸೌಲಭ್ಯ ಒದಗಿಸಬೇಕು. ಆರ್.ಸಿ.ಐ ಪುನರ್ ನವೀಕರಣವನ್ನು ರದ್ದುಗೊಳಿಸಬೇಕು. ಸಹಾಯಧನ ಯೋಜನೆ ಮಾರ್ಗಸೂಚಿ ದೋಷ ಪೂರಿತವಾಗಿದ್ದು, ಅದನ್ನು ಪುನರ್ ರಚಿಸಬೇಕು. ಈ ಸಂದರ್ಭ ವಿಶೇಷ ಶಿಕ್ಷಣ ಕ್ಷೇತ್ರದ ಪರಿಣಿತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅನುದಾನ ಮಂಜೂರಾತಿಗೆ ಇರುವ ನಿರ್ಬಂಧವನ್ನು ತೆಗೆದು ಹಾಕಬೇಕು. 25 ವರ್ಷ ಮೀರಿದ ಬುದ್ಧಿಮಾಂದ್ಯ ವಯಸ್ಕರಿಗೆ ವೃತ್ತಿಪರ ತರಗತಿಗಳನ್ನು ರಾಜ್ಯಾದ್ಯಂತ ಪ್ರಾರಂಭಿಸಲು ಆದೇಶ ನೀಡಿ ಅನುದಾನ ಮಂಜೂರು ಮಾಡಬೇಕು ಮೊದಲಾದ ಬೇಡಿಕೆಗಳ ಮನವಿ ಸಲ್ಲಿಸಲಾಯಿತು.


ಈ ವಿಚಾರವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆಯವರ ಗಮನಕ್ಕೂ ಹಾಗೂ ಮುಖ್ಯಮಂತ್ರಿಯವರ ಗಮನಕ್ಕೂ ತರುತ್ತೇನೆ. ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸ್ಪೀಕರ್ ಯು.ಟಿ.ಖಾದರ್ ಭರವಸೆ ನೀಡಿದರು.
ನಿಯೋಗದಲ್ಲಿ ರಾಜ್ಯದ 14 ಜಿಲ್ಲೆಗಳಿಂದ ಸುಮಾರು 60 ಶಾಲೆಗಳ ಮುಖ್ಯಸ್ಥರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net