ರಾಜ್ಯದಲ್ಲಿ ನಾಲ್ಕನೇ ಸ್ಥಾನದಲ್ಲಿ ಮಂಗಳೂರು

mangalore new
Published on

ಮಂಗಳೂರು: ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮಂಗಳೂರು ನಗರವನ್ನು ಸ್ಮಾರ್ಟ್ ಆಗಿ ರೂಪಿಸುವ ಪ್ರಕ್ರಿಯೆಯಲ್ಲಿ ನಗರದ ಸಾರ್ವಜನಿಕರೂ ಭಾಗವಹಿಸಲು ಅವಕಾಶ ನೀಡಲಾಗಿದ್ದು, ಅದರ ಭಾಗವೇ ಸುಲಲಿತ ಜೀವನ ಸೂಚ್ಯಂಕ ಸಮೀಕ್ಷೆ(ಇಒಎಲ್).

ಫೆ.1ರಿಂದ ಆರಂಭವಾಗಿರುವ ಈ ಸಮೀಕ್ಷೆ ಫೆ.29ರಂದು ಕೊನೆಗೊಳ್ಳಲಿದೆ. ಈವರೆಗಿನ ಸಮೀಕ್ಷೆ ಪ್ರಕಾರ ಮಂಗಳೂರು ರಾಜ್ಯದ ನಗರಗಳ ಪೈಕಿ 4ನೇ ಸ್ಥಾನದಲ್ಲಿದೆ. ಸುಮಾರು 5.5 ಲಕ್ಷ ಜನಸಂಖ್ಯೆ ಹೊಂದಿರುವ ಮಂಗಳೂರು ನಗರದಲ್ಲಿ ಈವರೆಗೆ ಕೇವಲ 7,189 ಮಾತ್ರ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ಕನಿಷ್ಠ 10 ಸಾವಿರ ಮಂದಿ ಭಾಗವಹಿಸಬೇಕು ಎನ್ನುವುದು ಮಂಗಳೂರು ಸ್ಮಾರ್ಟ್ ಸಿಟಿ ಸಂಸ್ಥೆಯ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಅಂತಿಮ ಪ್ರಯತ್ನ ಮುಂದುವರಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದಷ್ಟು ಮಂಗಳೂರಿಗೆ ತನ್ನ ಸ್ಥಾನವನ್ನು ಉತ್ತಮಪಡಿಸಿಕೊಳ್ಳಲು ಅವಕಾಶ ದೊರೆಯಲಿದೆ.

ಭಾರತ ಸರ್ಕಾರದ ಸ್ಮಾರ್ಟ್ ಸಿಟೀಸ್ ಮಿಷನ್ ನಗರಗಳು ಪ್ರಮುಖ ಮೂಲಸೌಕರ್ಯಗಳನ್ನು ಒದಗಿಸುವ ಹಾಗೂ ನಾಗರಿಕರಿಗೆ ಯೋಗ್ಯವಾದ ಸುಲಲಿತ ಜೀವನಮಟ್ಟ, ಸ್ವಚ್ಛ ಮತ್ತು ಸುಸ್ಥಿರ ಪರಿಸರ, ಉತ್ತಮ ಪರಿಹಾರಗಳಿಗೆ ಅನ್ವಯಿಸುವ ನಗರಗಳನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. 2017ರ ಸಮೀಕ್ಷೆಯಲ್ಲಿ 100 ಸ್ಮಾರ್ಟ್ ನಗರಗಳಲ್ಲಿ ಮಂಗಳೂರು ನಗರ 41ನೇ ಸ್ಥಾನದಲ್ಲಿತ್ತು. ಈ ವರ್ಷ 114 ನಗರಗಳು ಸಮೀಕ್ಷೆಯಲ್ಲಿ ಭಾಗವಹಿಸಿದ್ದು, 100 ಸ್ಮಾರ್ಟ್ ನಗರಗಳು ಮತ್ತು 14 ನಗರಗಳು ಭಾಗವಹಿಸುತ್ತಿವೆ.

ಅಭಿಪ್ರಾಯ ದಾಖಲು ಹೇಗೆ? https://eol2019.org/CitizenFeedback>@SmartCitiesMission ¶æàÓ…ŸáP… @easeofliving2019 qÌorÃ…- @easeofliving19 @MoHUA & ವಿಳಾಸ ಮೂಲಕ ಸಾರ್ವಜನಿಕರು ವಿದ್ಯುನ್ಮಾನ ವಾಹಿನಿ, ಮುದ್ರಣ ಮಾಧ್ಯಮ ಹಾಗೂ ಟ್ವಿಟ್ಟರ್ ಮತ್ತು ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ದಾಖಲಿಸಬಹುದು. ಕ್ಯೂಆರ್ ಕೋಡ್ ಮೂಲಕವೂ ಕೂಡ ಸಂಬಂಧಪಟ್ಟ ಪೇಜ್ ತೆರೆದು ಅಭಿಪ್ರಾಯ ದಾಖಲಿಸಬಹುದು.

ಸುಲಲಿತ ಜೀವನ ಸೂಚ್ಯಂಕ ಸಮೀಕ್ಷೆಗೆ ಕೊನೇ ಎರಡು ದಿನ ಮಾತ್ರ ಬಾಕಿಯಿದೆ. ಸಾರ್ವಜನಿಕರಿಗೆ ಕೊನೇ ಅವಕಾಶವಿದ್ದು, ಮಂಗಳೂರು ನಗರವನ್ನು ನಂಬರ್ ವನ್ ಸ್ಥಾನಕ್ಕೇರಿಸಲು ಪ್ರಯತ್ನಿಸಬೇಕು. ಕನಿಷ್ಠ 10 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದರೆ ಇದು ಸಾಧ್ಯವಾಗಬಹುದು. - ಮೊಹಮ್ಮದ್ ನಜೀರ್, ಮಂಗಳೂರು ಸ್ಮಾರ್ಟ್ ಸಿಟಿ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net