ಮಂಗಳೂರು ಸ್ಮಾರ್ಟ್‌ ಸಿಟಿಯಿಂದ ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆ

IMG-20211003-WA0007
Published on

ಮಂಗಳೂರು: ಮಂಗಳೂರು ಸ್ಮಾರ್ಟ್‌ ಸಿಟಿ ಲಿ. ವತಿಯಿಂದ ʼಆಜಾದಿ ಕಾ ಅಮೃತ್ ಮಹೋತ್ಸವʼ ಆಚರಣೆ ಭಾನುವಾರ ಜರುಗಿತು. ಇದರ ಅಂಗವಾಗಿ ನಗರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.
ಎ.ಬಿ.ಶೆಟ್ಟಿ ವೃತ್ತದಲ್ಲಿ ವಿಂಟೇಜ್‌ ಕಾರು, ಸ್ಕೂಟರ್‌, ಸೈಕಲ್‌ ರ‍್ಯಾಲಿ, ವಾಕಥಾನ್‌ಗೆ ಮೇಯರ್‌ ಪ್ರೇಮಾನಂದ ಶೆಟ್ಟಿ ಮತ್ತು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಚಾಲನೆ ನೀಡಿದರು. ಮೀನುಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ನಿತಿನ್ ಕುಮಾರ್, ಸ್ಮಾರ್ಟ್ ಸಿಟಿ ಎಂಡಿ‌ ಪ್ರಶಾಂತ್ ಕುಮಾರ್ ಮಿಶ್ರಾ, ಪಾಲಿಕೆ ಮುಖ್ಯ ಸಚೇತಕ ಸುಧೀರ್‌ ಶೆಟ್ಟಿ ಕಣ್ಣೂರು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಂದೀಪ್‌ ಗರೋಡಿ, ಲೋಕೇಶ್‌ ಬೊಳ್ಳಾಜೆ, ಕಾರ್ಪೋರೇಟರ್‌ ಪೂರ್ಣಿಮಾ ಮೊದಲಾದವರಿದ್ದರು.
ನಗರದ ಎ.ಬಿ. ಶೆಟ್ಟಿ ವೃತ್ತದ ಬಳಿಯಿಂದ ಆರಂಭವಾದ ರ‍್ಯಾಲಿ, ಕ್ಲಾಕ್‌ ಟವರ್‌, ಹಂಪನಕಟ್ಟೆ ಸಿಗ್ನಲ್‌, ಅಂಬೇಡ್ಕರ್‌ ವೃತ್ತ, ಬಂಟ್ಸ್‌ ಹಾಸ್ಟೆಲ್‌, ಪಿವಿಎಸ್‌, ಎಂಜಿ ರಸ್ತೆಯಲ್ಲಿ ಬಳ್ಳಾಲ್‌ಭಾಗ್‌, ಲಾಲ್‌ಭಾಗ್‌, ಲೇಡಿಹಿಲ್‌ ವೃತ್ತದ ಮೂಲಕ ಮಂಗಳಾ ಕ್ರೀಡಾಂಗಣದಲ್ಲಿ ಕೊನೆಗೊಂಡಿತು. ಮೇಯರ್‌ ಪ್ರೇಮಾನಂದ ಶೆಟ್ಟಿ ವಿಂಟೇಜ್‌ ಕಾರೊಂದನ್ನು ಚಲಾಯಿಸಿ ಗಮನ ಸೆಳೆದರು. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರು ಆ ಕಾರಿನಲ್ಲಿ ಕುಳಿತಿದ್ದರು. ಮಂಗಳಾ ಕ್ರೀಡಾಂಗಣದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಯಿತು. ಜತೆಗೆ ಹೊರಭಾಗದಲ್ಲಿ ಸ್ಟ್ರೀಟ್‌ಫುಡ್‌ ಫೆಸ್ಟಿವಲ್‌, ಲಾಲ್‌ಭಾಗ್‌ನಿಂದ ಲೇಡಿಹಿಲ್‌ ವರೆಗೆ, ಕಲಾವಿದರಿಂದ ಚಿತ್ರ ರಚನೆ, ಚಿತ್ರ ಕಲಾ ಪ್ರದರ್ಶನ, ವಿವಿಧ ಮಳಿಗೆಗಳಲ್ಲಿ ಪ್ರದರ್ಶನ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net