ಚರ್ಮ ದಾನದ ಜಾಗೃತಿ ಆವಶ್ಯಕ; ಫಾ.ಮುಲ್ಲರ್ ರೋಟರಿ ಸ್ಕಿನ್ ಬ್ಯಾಂಕ್ ಉದ್ಘಾಟಿಸಿ ವಂ.ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಪ್ರತಿಪಾದನೆ

IMG-20240315-WA0215
Published on

ಮಂಗಳೂರು: ಬೆಂಕಿಯ ಸುಟ್ಟ ಗಾಯವಾದವರಿಗೆ ತಕ್ಷಣ ಚಿಕಿತ್ಸೆ ಸಹಿತ ಹಲವು ಸಂದರ್ಭಗಳಲ್ಲಿ ಸ್ಕಿನ್ ಬ್ಯಾಂಕ್‌ನಿಂದ ಹೆಚ್ಚು ಅನುಕೂಲವಾಗಲಿದೆ. ಆದ್ದರಿಂದ ಚರ್ಮ ದಾನದ ಬಗ್ಗೆ ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಾದರ್ ಮುಲ್ಲರ್ ಸಂಸ್ಥೆಯ ನಿರ್ದೇಶಕ ವಂ.ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಹೇಳಿದರು.
ನಗರದ ಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ  ಮಂಗಳೂರು ರೋಟರಿ ಕ್ಲಬ್ ವತಿಯಿಂದ ನಿರ್ಮಿಸಲಾಗಿರುವ ಾದರ್ ಮುಲ್ಲರ್ ರೋಟರಿ ಸ್ಕಿನ್ ಬ್ಯಾಂಕ್‌ನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
 ‘ಸ್ಕಿನ್ ಬ್ಯಾಂಕ್’ ಅನೇಕ ವರ್ಷಗಳ ಹಿಂದಿನ ಪರಿಕಲ್ಪನೆಯಾಗಿದ್ದು, ಇಂದು ನನಸಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಸ್ಕಿನ್ ಬ್ಯಾಂಕ್ ಆಗಿದೆ. ಇದು ಸಂಸ್ಥೆಯ ಅಭಿವೃದ್ಧಿಯ ಶಿಖರದಲ್ಲಿ ಹೊಸ ಗರಿ ಎಂದು ಹೇಳಿದರು.
ಯೋಜನೆಯ ಅಧ್ಯಕ್ಷ ಅರ್ಚಿಬಾಲ್ಡ್ ಮಿನೇಜಸ್ ಮಾತನಾಡಿ, ನೀಡುವುದು ಅಂದುಕೊಂಡಷ್ಟು ಸುಲಭವಿಲ್ಲ. ತಕ್ಷಣಕ್ಕೆ ಚರ್ಮ ಪಡೆಯಲು ಕಷ್ಟ ಸಾಧ್ಯವಾಗಿದ್ದು, ಇಂದಿನ ವಿನೂತನ ತಂತ್ರಜ್ಞಾನ ಇದಕ್ಕೆ ವ್ಯತಿರಿಕ್ತವಾಗಿದೆ. ಸ್ಕಿನ್ ಬ್ಯಾಂಕ್ ಮೂಲಕ ಇಂದು ವಿವಿಧ ಗಾಯಗಳಾದವರ ಜೀವ ಉಳಿಸಲು ಸಾಧ್ಯ ಎಂದರು.
ಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ಾ.ಅಜಿತ್ ಬಿ. ಮಿನೇಜಸ್, ಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಆಡಳಿತಾಧಿಕಾರಿ ಾ.ಜಾರ್ಜ್ ಜೀವನ್ ಸಿಕ್ವೆರಾ,, ಡೀನ್ ಆ್ಯಂಟನಿ ಸಿಲ್ವನ್ ಡಿಸೋಜಾ, ವೈದ್ಯಕೀಯ ಅಧೀಕ್ಷಕ ಡಾ.ಉದಯ್ ಕುಮಾರ್ ಕೆ.,ರೋಟರಿ ಕ್ಲಬ್‌ನ ಪ್ರಮುಖರಾದ ಪ್ರಕಾಶ್ ಕಾರಂತ್, ಶಿವಾಣಿ ಬಾಳಿಗಾ, ಕಿಶಾನ್ ಕುಮಾರ್, ಆರ್.ಕೆ. ಭಟ್, ಅರ್ಚಿಬಾಲ್ಡ್ ಮಿನೇಜಸ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net