

ಮಂಗಳೂರು: ವಯೋವೃದ್ಧ ಅಕ್ಕ ಮತ್ತು ತಂಗಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಗರದ ಕದ್ರಿ ಕಂಬಳದ ಚಂದ್ರಿಕಾ ಬಡಾವಣೆಯಲ್ಲಿ ಮಂಗಳವಾರ ಸಂಭವಿಸಿದೆ.
ಜಗನ್ನಾಥ್ ಭಂಡಾರಿ ಎಂಬುವವರ ಪತ್ನಿ ಲತಾ ಭಂಡಾರಿ(70) ಮತ್ತು ಆಕೆಯ ಅಕ್ಕ ಸುಂದರಿ ಶೆಟ್ಟಿ(80) ನೇಣಿಗೆ ಶರಣಾದವರು. ಮನೆಯಲ್ಲಿ ಜಗನ್ನಾಥ್ ಭಂಡಾರಿ, ಲತಾ ಭಂಡಾರಿ ಮತ್ತು ಸುಂದರಿ ಶೆಟ್ಟಿ ವಾಸವಾಗಿದ್ದರು. 78 ವರ್ಷದ ಜಗನ್ನಾಥ್ ಭಂಡಾರಿ ಎಂದಿನಂತೆ ಬಾರ್‌ಗೆ ಕೆಲಸಕ್ಕೆ ಹೋಗಿದ್ದರು. ಸಂಜೆ 4.30ಕ್ಕೆ ವಾಪಸ್ ಮನೆಗೆ ಬಂದು ನೋಡಿದಾಗ ಬಾಗಿಲು ಮುಚ್ಚಿತ್ತು. ಕಿಟಕಿಯಿಂದ ನೋಡಿದಾಗ ಇಬ್ಬರು ಕೂಡ ನೇಣುಬಿಗಿದು ಮೃತಪಟ್ಟ ಸ್ಥಿತಿಯಲ್ಲಿದ್ದರು. ಕೌಟುಂಬಿಕ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.