

ಮಂಗಳೂರು: ಷೇರು ಟ್ರೇಡಿಂಗ್‌ನಲ್ಲಿ ಹಣ ತೊಡಗಿಸಿ 74,18,952 ರೂ. ವಂಚನೆಗೊಳಗಾದ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರು ಮಾ.15ರಂದು ಇನ್‌ಸ್ಟಾಗ್ರಾಂ ನೋಡುತ್ತಿದ್ದಾಗ ಅದರಲ್ಲಿ ಷೇರು ಟ್ರೇಡಿಂಗ್ ಜಾಹೀರಾತು ನೋಡಿದ್ದಾರೆ. ಜಾಹಿರಾತಿನ ಮೇಲೆ ಕ್ಲೀಕ್ ಮಾಡಿ ನೋಡಿದಾಗ ಅದರಲ್ಲಿ ಷೇರು ಟ್ರೇಡಿಂಗ್ ಬಗ್ಗೆ ಮಾಹಿತಿ ಸಿಕ್ಕಿದೆ. ಇನ್ಸ್ಟಾಗ್ರಾಂ ಮೂಲಕ ಷೇರು ಟ್ರೇಡಿಂಗ್ ಬಗ್ಗೆ ಮೇಸೆಜ್ ಮಾಡಿದಾಗ ಇವರ ವಾಟ್ಸಾೃಪ್‌ಗೆ ಅಪರಿಚಿತ ವ್ಯಕ್ತಿಯ ಮೊಬೈಲ್‌ನಿಂದ ವಾಟ್ಸಾೃಪ್ ಲಿಂಕ್ ಬಂದಿದೆ. ಆ ಲಿಂಕ್ ನ್ನು ತೆರೆದು ನೋಡಿದಾಗ ಅದರಲ್ಲಿ ಈ101 ಅ್ಟಠಿಛಿಞಜಿ ಖಛಿಞಜ್ಞಿಚ್ಟ ಎ್ಟಟ್ಠ ಎಂಬ ಹೆಸರಿನ ಗ್ರೂಪ್ ಕಂಡು ಬಂದಿದೆ. ನಂತರ ದೂರುದಾರರನ್ನು ಸದ್ರಿ ಗ್ರೂಪ್ ಗೆ ಸೇರಿಸಿಕೊಂಡಿದ್ದಾರೆ. ಈ ಗ್ರೂಪ್ ನಲ್ಲಿ ಷೇರು ಟ್ರೇಡಿಂಗ್ ಬಗ್ಗೆ ಆನ್ ಲೈನ್ ಮೂಲಕ ತರಬೇತಿಯನ್ನು ನೀಡಿದ್ದಾರೆ. ಏ.25 ರಂದು ಠಿಠಿ://್ಛಛ್ಟಿ.ಠ್ಠ್ಞ್ಠಿ.ಠಿಟ್ಟಛಿ ಕಂಪೆನಿಯಿಂದ ಟ್ರೇಡಿಂಗ್ ಖಾತೆಯನ್ನು ತೆರೆಯಲು ವಾಟ್ಸಾೃಪ್ ಮೂಲಕ ಮೆಸೇಜ್ ಬಂದಿದೆ.ಹೆಚ್ಚಿನ ಹಣ ತೊಡಗಿಸಿದ್ದಲ್ಲಿ ಹೆಚ್ಚು ಲಾಭಗಳಿಸಬಹುದು ಎಂದು ಹೇಳಿ ಷೇರು ಟ್ರೇಡಿಂಗ್ ಬಗ್ಗೆ ಪ್ರೇರೇಪಿಸಿದ್ದಾರೆ.
ಮೊದಲಿಗೆ 10,000ರೂ. ಹಣವನ್ನು ತೊಡಗಿಸಲು ತಿಳಿಸಿ ಇಂಡಸ್ ಇಂಡ್ ಬ್ಯಾಂಕ್ ಖಾತೆಯ ವಿವರವನ್ನು ಕಳುಹಿಸಿದ್ದಾರೆ. ಅದರಂತೆ ದೂರುದಾರರು ಆ ವ್ಯಕ್ತಿಯು ಬ್ಯಾಂಕ್ ಖಾತೆಗೆ 10,000 ರೂ. ಹಣವನ್ನು ಅ್ಕಉಐಖ ಕ್ಕೃಊಐ ಖ್ಕಅಈಐಘೆಎ ಕಂಪೆನಿಗೆ ಹಣವನ್ನು ಪಾವತಿಸಿರುತ್ತಾರೆ. ನಂತರ ಮಾ.15 ರಿಂದ ಜು.4ರ ವರೆಗೆ ದೂರಿನಲ್ಲಿ ನಮೂದಿಸಿರುವ ದೂರವಾಣಿ ನಂಬ್ರಗಳಿಂದ ವಾಟ್ಸಾಫ್ ಮೇಸೆಜ್ ಮೂಲಕ ಕಂಪೆನಿಯವರು ಎಂದು ಪರಿಚಯಿಸಿಕೊಂಡು ಷೇರು ಟ್ರೇಡಿಂಗ್ ನಲ್ಲಿ ಹಣ ತೊಡಗಿಸಲು ಹೇಳಿದ್ದರು. ದೂರುದಾರರು ಹಂತ ಹಂತವಾಗಿ ಅಪರಿಚಿತ ವ್ಯಕ್ತಿಯು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ 73,68,952 ರೂ. ಹಾಗೂ ಉಳಿದ 50,000 ರೂ. ಹಣವನ್ನು ಕಂಪೆನಿಯವರಿಗೆ ಪೋನ್ ಪೇ ಮೂಲಕ ಪಾವತಿಸಿರುತ್ತಾರೆ. ನಂತರ ಕಂಪೆನಿಯಿಂದ ಹೂಡಿಕೆಮಾಡಿದ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಸಾದ್ಯವಾಗದೇ ಇದ್ದುದರಿಂದ ಅನುಮಾನ ಬಂದು ತನ್ನ ಸ್ನೇಹಿತರಲ್ಲಿ ವಿಚಾರಿಸಿದಾಗ ಮೋಸ ಹೋಗಿರುವ ವಿಚಾರ ಗಮನಕ್ಕೆ ಬಂದು ಪ್ರಕರಣ ದಾಖಲಿಸಿದ್ದಾರೆ.