ಶರವು ಸಂಭ್ರಮದ ವರ್ಷಾವಧಿ ರಥೋತ್ಸವ

sharavv (1)
Published on

ಮಂಗಳೂರು: ನಗರದಲ್ಲಿರುವ ಶರವು ಶ್ರೀ ಮಹಾಗಣಪತಿ ದೇವಸ್ಥಾನದ ವರ್ಷಾವಧಿ ಮಹೋತ್ಸವದ ಅಂಗವಾಗಿ ಸಂಭ್ರಮದ ರಥೋತ್ಸವ ಮಂಗಳವಾರ ನಡೆಯಿತು. ಸಾವಿರಾರು ಭಕ್ತರು ಕಣ್ತುಂಬಿಕೊಂಡು ಪುನೀತರಾದರು.


ಬ್ರಹ್ಮಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿ ಮತ್ತು ಪಿ.ಕೆ. ಪ್ರಶಾಂತ್ ಆಚಾರ್ಯರ ನೇತೃತ್ವದಲ್ಲಿ ಬೆಳಗ್ಗೆ ರಥೋತ್ಸವ ವೈದಿಕ ಕಾರ್ಯಕ್ರಮಗಳು ಆರಂಭವಾದವು. 11.30ಕ್ಕೆ ಮಹಾಪೂಜೆ, ಮಧ್ಯಾಹ್ನ 12 ಶ್ರೀ ಮನ್ಮಹಾರಥೋತ್ಸವ, ರಾತ್ರಿ 9 ರಿಂದ ದೊಡ್ಡ ರಥೋತ್ಸವ, 10 ಕ್ಕೆ ಮಹಾಪೂಜೆ, ಶ್ರೀ ಭೂತಬಲಿ, ಕವಾಟ ಬಂಧನ ನಡೆಯಿತು.


ಸಂಜೆ 5.30ರಿಂದ ಶರವು ದೇವಸ್ಥಾನದ ಶ್ರೀ ರಾಜನ್ ಮತ್ತು ಬಳಗದವರಿಂದ ನಾಗಸ್ವರ ಮತ್ತು ಸ್ಯಾಕೋ್ಸೆೆನ್ ಕಚೇರಿ 7 ರಿಂದ ಶರಭೇಶ್ವರ ಕೃಪಾಪೋಷಿತ ಯಕ್ಷಗಾನ ಸಂಘದಿಂದ ಯಕ್ಷಗಾನ ತಾಳಮದ್ದಳೆ ನಡೆಯಿತು.


ಈ ಸಂದರ್ಭ ದೇವಸ್ಥಾನದ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸಿ, ಸುದೇಶ್ ಶಾಸಿ, ರಾಹುಲ್ ಶಾಸಿ, ಪ್ರಮೀಳಾ ಆರ್. ಶಾಸಿ, ಪದ್ಮಾವತಿ ಎಸ್. ಶಾಸಿ, ಅಕ್ಷತಾ ಆರ್. ಶಾಸಿ, ಗಣೇಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net