ಶಾರದಾ ವಿದ್ಯಾಲಯದಲ್ಲಿ ಸಾಧಕರೊಂದಿಗೆ ಸಂಭ್ರಮ ರಿಂಗಣಿಸಿದ ಕನ್ನಡ ಹಾಡುಗಳು

mng--30 OCt sharada
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ನಮ್ಮ ಸಾಧಕರೊಂದಿಗೆ ಸಂಭ್ರಮ ಕಾರ್ಯಕ್ರಮ ನಗರದ ಶಾರದಾ ವಿದ್ಯಾಲಯದಲ್ಲಿ ಜರುಗಿತು.

ಕನ್ನಡ, ತುಳು ಸಾಹಿತಿ ಬೆನೆಟ್ ಜಿ. ಅಮ್ಮನ್ನ ಮತ್ತು ಕ ಸಾ ಪ ಕೇಂದ್ರ ಮಾರ್ಗದರ್ಶಿ ಸಮಿತಿಯ ಸದಸ್ಯ ಡಾ.ಮುರಲೀಮೋಹನ್ ಚೂಂತಾರು ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಇಂಚರ ತಂಡದ ಗಾಯಕಿಯರಾದ ರತ್ನಾವತಿ ಜೆ. ಬೈಕಾಡಿ, ಗೀತಾ ಮಲ್ಯ, ಜಯಲಕ್ಷ್ಮೀ ಬಾಲಕೃಷ್ಣ, ಜಯಶ್ರೀ, ಉಮಾ ಫಾಲಾಕ್ಷಪ್ಪ ಸಮೂಹ ಗಾಯನದಲ್ಲಿ ಮತ್ತು ಪ್ರತೀಕ್ಷಾ ಭಟ್ ಕೋಂಬ್ರಾಜೆ, ಸಹಸ್ರ ಕೋಂಬ್ರಾಜೆ, ಮುರಳೀಧರ ಭಾರದ್ವಾಜ್, ಉಷಾ ಜಿ. ಪ್ರಸಾದ್ ಕನ್ನಡ ಹಾಡುಗಳನ್ನು ಪ್ರಸ್ತುತಪಡಿಸಿದರು. ಡಾ.ಶ್ರೀಕೃಷ್ಣ ಭಟ್ ಸುಣ್ಣಂಗುಳಿ ಅವರ ಕಾವ್ಯ ವಾಚನ ನೆರೆದವರ ಮನಸೂರೆಗೊಂಡಿತು.

ಘಟಕದ ಅಧ್ಯಕ್ಷ ಮಂಜುನಾಥ ಎಸ್. ರೇವಣ್ಕರ್ ಅಧ್ಯಕ್ಷತೆ ವಹಿಸಿದ್ದರು.

ಕ.ಸಾ.ಪ ಜಿಲ್ಲಾ ಸಮಿತಿಯ ಸನತ್ ಕುಮಾರ್ ಜೈನ್, ಘಟಕದ ಸದಸ್ಯ ಬಿ. ಕೆ. ನಾಯ್ಕ, ರವೀಂದ್ರನಾಥ್, ನಿಜಗುಣ ದೊಡ್ಡಮನಿ, ಅನುಜ್, ಡಾ.ರಾಜಶ್ರೀ ಮೋಹನ್ ಮೊದಲಾದವರಿದ್ದರು.

ಘಟಕದ ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ ಸ್ವಾಗತಿಸಿದರು. ಗೌರವ ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net