ಶಕ್ತಿ ಕ್ಯಾನ್ ಕ್ರಿಯೇಟ್ ಬೇಸಿಗೆ ಶಿಬಿರ ಸಮಾರೋಪ

mng--13 April Shakhti
Published on

ಮಂಗಳೂರು : ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ಕಳದೆ 12 ದಿನಗಳಿಂದ ನಡೆದ ಶಕ್ತಿ ಕ್ಯಾನ್ ಕ್ರಿಯೇಟ್ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಶನಿವಾರ ನಡೆಯಿತು.

ವಕೀಲರು ಹಾಗೂ ನೋಟರಿ ಬಿ.ಗುರುಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಶಕ್ತಿ ವಿದ್ಯಾ ಸಂಸ್ಥೆಯು ಕೇವಲ ಶಕ್ತಿಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಮಾತ್ರವಲ್ಲದೆ ಬೇರೆ ಬೇರೆ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೂ ಬೇಸಿಗೆ ಶಿಬಿರದಲ್ಲಿ ಭಾಗವಹಿಸಲು ಅವಕಾಶ ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಲು ಈ ಬೇಸಿಗೆ ಶಿಬಿರವು ಬಹಳ ಪ್ರಯೋಜನಕಾರಿಯಾಗಿದೆ. ಈಗಿನ ಮಕ್ಕಳಲ್ಲಿ ಇತರ ಮಕ್ಕಳ ಜೊತೆ ಬೇರೆಯುವ ಗುಣವನ್ನು ರೂಢಿಸಿಕೊಳ್ಳಲು ಇದೊಂದು ಅವಕಾಶವಾಗಿದೆ ಎಂದರು.

ವಿದ್ಯಾರ್ಥಿಗಳಾದ ಆಲೇನ್, ಕೋಯಿಶಾ ಮತ್ತು ಶ್ಲೋಕ ಹಾಗೂ ಪೋಷಕರಾದ ಚೇತನಾ ಅವರು ಈ ಬೇಸಿಗೆ ಶಿಬಿರದ ಅನುಭವ ಹಂಚಿಕೊಂಡರು.

ಈ ಬೇಸಿಗೆ ಶಿಬಿರದಲ್ಲಿ ಮ್ಯಾಜಿಕ್, ಮಡಿಕೆ ತಯಾರಿಕೆ, ಚಲನಚಿತ್ರದ ವಿಕ್ಷಣೆ,ಪೈಜಾಮ ಪಾರ್ಟಿ, ಬೆಂಕಿ ಇಲ್ಲದೆ ಅಡುಗೆ,ಕಥೆ ಹೇಳುವುದು, ಆರೋಗ್ಯ ಮತ್ತು ನೈರ್ಮಲ್ಯ, ವಾಟರ್ ಸ್ಪ್ಲಾಶ್ ಪಾರ್ಟಿ, ತೋಟಗಾರಿಕೆ,ನೃತ್ಯ, ಜುಂಬಾ,ಈಜು, ಆಟೋಟ, ನಾಟಕ, ಗಾಳಿಪಟ ಹಾರಾಟ, ಬಾಟಲ್ ಪೆಯಿಟಿಂಗ್ ಸೇರಿದಂತೆ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಅನೇಕ ಕಾರ್ಯಕ್ರಮವನ್ನು ಈ 12 ದಿನದಲ್ಲಿ ಆಯೋಜಿಸಲಾಗಿತ್ತು. ತಣ್ಣಿರುಬಾವಿ ಸಮುದ್ರ ತೀರಕ್ಕೆ ಮಕ್ಕಳ ಭೇಟಿ ನೀಡಿದರು.

ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ ಕೆ. ಮಾತನಾಡಿ, ನಾವು 6 ವರ್ಷಗಳಿಂದ ಇಂತಹ ಬೇಸಿಗೆ ಶಿಬಿರವನ್ನು ಆಯೋಜನೆ ಮಾಡಿಕೊಂಡು ಬರುತ್ತಿದ್ದೇವೆ. ಈ ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿಬರಲು ನಮ್ಮ ಸಂಸ್ಥೆಯ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಮಹತ್ತರವಾದ ಶ್ರಮವನ್ನು ವಹಿಸಿರುವುದನನು ಈ ಸಂದರ್ಭದಲ್ಲಿ ಶ್ಲಾಘಿಸಿದರು.

ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲರಾದ ಬಬಿತಾ ಸೂರಜ್ ಉಪಸ್ಥಿತರಿದ್ದರು. ಚೇತನ ತಲಪಾಡಿ ಸ್ವಾಗತಿಸಿದರು. ಸೀಮಾ ವಂದಿಸಿದರು. ಶಿಕ್ಷಕಿ ಪ್ರೀಯದರ್ಶಿನಿ ನಿರೂಪಿಸಿದರು,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net