

ಮಂಗಳೂರು: ನಗರದ ಕೊಡಿಯಾಲ ಗುತ್ತುನಲ್ಲಿ ಎಸ್ ಸಿ ಎಸ್ ಪ್ರೀಸ್ಕೂಲ್ ಶುಕ್ರವಾರ ಆರಂಭಗೊಂಡಿತು.
ಕೊಡಿಯಾಲಗುತ್ತುನಲ್ಲಿರುವ ಪ್ರಿಸ್ಕೂಲನ್ನು ಎಸ್‌ಸಿಎಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ರಜನೀಶ್ ಸೊರಕೆ ಉದ್ಘಾಟಿಸಿದರು.
ಅತಿಥಿಯಾಗಿದ್ದ ಎಸ್‌ಸಿಎಸ್ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಯು.ಕೆ.ಖಾಲೀದ್ ಮಾತನಾಡಿ, ಎಸ್‌ಸಿಎಸ್ ಪ್ರಿಸ್ಕೂಲ್‌ಗಳಲ್ಲಿ, ಚಿಕ್ಕ ವಯಸ್ಸಿನಿಂದಲೇ ಸೃಜನಶೀಲತೆ ಮತ್ತು ಕುತೂಹಲವನ್ನು ಪೋಷಿಸುವಲ್ಲಿ ನಾವು ಗಮನ ನೀಡುತ್ತೇವೆ ಎಂದರು.
ಕಾನೂನು ಸಲಹೆಗಾರೆ ಶ್ರೀದೇವಿ ಗೌರವ ಅತಿಥಿಯಾಗಿದ್ದರು. ಶಾಲೆಯ ಸಂಯೋಜಕಿ ಚರಿಷ್ಮಾ ಸ್ವಾಗತಿಸಿದರು.
ಮಂಗಳೂರಿನಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಎಸ್ ಸಿ ಎಸ್ ಪ್ರಿಸ್ಕೂಲ್‌ಗಳಿಗೆ ಇದು ಇನ್ನೊಂದು ಸೇರ್ಪಡೆಯಾಗಿದೆ. 2018 ರಲ್ಲಿ ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ತನ್ನ ಮೊದಲ ಪ್ರಿಸ್ಕೂಲ್ ಅನ್ನು ಸ್ಥಾಪಿಸುವ ಮೂಲಕ ಎಸ್ ಸಿ ಎಸ್ ಸಮೂಹ ಸಂಸ್ಥೆಗಳು ತನ್ನ ಅಸ್ತಿತ್ವವನ್ನು ನಿರಂತರವಾಗಿ ವಿಸ್ತರಿಸಿದೆ. 2023ರಲ್ಲಿ ಎಸ್ ಸಿ ಎಸ್ ಪ್ರಿಸ್ಕೂಲ್ ಅನ್ನು ಲಾಂಗ್ ಲೇನ್, ಉರ್ವಾದ ರಿವರ್ಸೈಡ್ ಕ್ಯಾಂಪಸ್‌ನಲ್ಲಿ ಪ್ರಾರಂಭಿಸಲಾಯಿತು. ಇದು ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ.