ಜ್ಞಾನಾರ್ಜನೆಯ ಮೂಲ ಓದುವಿಕೆಯಲ್ಲಿದೆ ಎಸ್‌ಸಿಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಹಿತ್ಯ ಸಂಘ ಉದ್ಘಾಟಿಸಿ ಅಂಕಿತ್ ಕುಮಾರ್ ಹೇಳಿಕೆ

mng--6 Oct SCS college
Published on

ಮಂಗಳೂರು: ಓದುವಿಕೆಯು ವ್ಯಕ್ತಿಯನ್ನು ಶ್ರೇಷ್ಠತೆಯೆಡೆಗೆ ಕೊಂಡೊಯ್ಯುತ್ತದೆ. ಜ್ಞಾನಾರ್ಜನೆಯ ಮೂಲ ಓದುವುದರಲ್ಲೇ ಇದೆ ಎಂದು ಎನ್.ಎಂ.ಎ.ಎಮ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ,ನಿಟ್ಟೆ ಯೂನಿವರ್ಸಿಟಿ ಇಲ್ಲಿನ ಕೌನ್ಸಿಲರ್ ಅಂಕಿತ್ ಕುಮಾರ್ ಹೇಳಿದರು.


ಎಸ್.ಸಿ.ಎಸ್ ಪ್ರಥಮ ದರ್ಜೆ ಕಾಲೇಜು ಮಂಗಳೂರು ಇಲ್ಲಿ ನಡೆದ ಸಾಹಿತ್ಯ ಸಂಘ ಉದ್ಘಾಟನಾ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು .


ಭಾಷೆಗಳಿಗೆ ವಿಶಿಷ್ಠವಾದ ಶಕ್ತಿಯಿದೆ. ಅದನ್ನು ಸಾಹಿತ್ಯವು ಪ್ರತಿಬಿಂಬಿಸುತ್ತದೆ. ಯಾವುದೇ ಭಾಷೆಯಾದರೂ ನಾವು ಪ್ರೀತಿಸಿದರೆ ಮಾತ್ರ ಅದರ ಸತ್ವ ಮತ್ತು ಸತ್ಯ ತಿಳಿಯುತ್ತದೆ ಎಂದವರು ಹೇಳಿದರು.


ಕಾಲೇಜಿನ ಪ್ರಾಂಶುಪಾಲ ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ ಮಾತನಾಡಿ, ಭಾರತೀಯ ಭಾಷೆಗಳ ಕುರಿತು ಪ್ರೀತಿ ಮೂಡಬೇಕು. ಹಾಗಾದರೆ ಮಾತ್ರ ನಾವು ನಮ್ಮನ್ನು ಅರಿಯುವುದು ಸಾಧ್ಯವಾಗುತ್ತದೆ. ಪಾಶ್ಚಾತ್ಯ ಆಂಗ್ಲಭಾಷೆ ನಮಗೆ ಔಷಧವಾಗಬೇಕು. ನಮ್ಮ ತಾಯಿ ಭಾಷೆ ನಮಗೆ ಆಹಾರವಾಗಬೇಕು ಎಂದರು.


ಸಾಹಿತ್ಯ ಸಂಘದ ಸಂಯೋಜಕ ಪ್ರೊ. ಚರಿತ ಸ್ವಾಗತಿಸಿದರು. ಪ್ರೊ. ಹರ್ಷಿತ ವಂದಿಸಿದರು. ಸಾಹಿತ್ಯ ಸಂಘದ ವಿದ್ಯಾರ್ಥಿ ಪ್ರತಿನಿಧಿಗಳಾದ ಸೃಜನ್ ಹಾಗೂ ಅನ್ಷಿಕ ಉಪಸ್ಥಿತರಿದ್ದರು. ವಿದ್ಯಾರ್ಥಿ ಖುಷಿ ರಾಣಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net